ಉಡುಪಿ : ಲಸಿಕೆ ಕೂಡಲೇ ಪೂರೈಸಲು ಸಿಪಿಐಎಂ ಆಗ್ರಹ

Update: 2021-05-05 13:54 GMT

ಉಡುಪಿ: ಕುಂದಾಪುರ, ಕೋಟೇಶ್ವರ, ಬ್ರಹ್ಮಾವರ ಮೊದಲಾದ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆಯಿಂದಾಗಿ ಜನರಿಗೆ ತೊಂದರೆ ಆಗಿದೆ. ದಿನ ನಿತ್ಯ ವ್ಯಾಪಾರ, ವಹಿವಾಟು, ಕೂಲಿ ಕೆಲಸ ಮಾಡುವ ಬಡ, ಮಧ್ಯಮ ವರ್ಗದ ಜನರು ತಮ್ಮ ಆದಾಯಕ್ಕೆ ಸಂಚಕಾರ ತಂದುಕೊಂಡು ಆಸ್ಪತ್ರೆಗೆ ಹೋಗುತ್ತಾರೆ. ಆಶಾ ಕಾರ್ಯಕರ್ತೆಯರು ಸಮಯ ನಿಗದಿ ಮಾಡಿ ತಿಳಿಸಿದ್ದರೂ ಆಸ್ಪತ್ರೆಗೆ ಹೋದಾಗ, ’ನಾಳೆ ಬನ್ನಿ’ ಎಂದು ವಾಪಾಸು ಕಳಿಸಿದ್ದಾರೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ದೂರಿದೆ.

ಈ ಕೂಡಲೇ ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದು ಎಲ್ಲಾ ಸರಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News