ಉಡುಪಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಬೆಡ್ ನಿರ್ವಹಣೆಗಾಗಿ ನೋಡೆಲ್ ಅಧಿಕಾರಿಗಳ ನೇಮಕ

Update: 2021-05-05 15:46 GMT
ಸಾಂದರ್ಭಿಕ ಚಿತ್ರ

ಉಡುಪಿ, ಮೇ 5: ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಸಲುವಾಗಿ ಸೋಂಕು ಬಾಧಿತ ವ್ಯಕ್ತಿಗಳು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಹಾಗೂ ತೀರ ಅಗತ್ಯವಿದ್ದಲ್ಲಿ ಅಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡುವ ಸಲುವಾಗಿ ನೋಡೆಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಸೋಂಕು ಬಾಧಿತ ವ್ಯಕ್ತಿಗಳ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಯ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರಕಾರದಿಂದ ಆಯಾ ಆಸ್ಪತ್ರೆಗಳಲ್ಲಿರುವ ಬೆಡ್ ಹಾಗೂ ಐಸಿಯು ಮುಂತಾದ ವೈದ್ಯಕೀಯ ಸೌಲಭ್ಯಗಳ ಆಧಾರದಲ್ಲಿ ಸರಕಾರಿ ಕೋಟಾವನ್ನು ನಿಗದಿ ಪಡಿಸಲಾಗಿದೆ. ಆದರೆ ಕೆಲವು ಆಸ್ಪತ್ರೆಗಳು ಸರಕಾರಿ ಕೋಟಾದ ಬೆಡ್‌ಗಳನ್ನು ಸೋಂಕಿತರಿಗೆ ನೀಡದಿರುವ ಹಾಗೂ ಚಿಕಿತ್ಸೆಯನ್ನು ಸಮರ್ಪಕ ರೀತಿಯಲ್ಲಿ ನೀಡದಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಇದು ಕೋವಿಡ್-19 ಎರಡನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಆಡಳಿತಕ್ಕೆ ಸಮಸ್ಯೆಯನ್ನು ನೀಡುತ್ತಿದೆ.

ಆದುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕು ಬಾಧಿತ ವ್ಯಕ್ತಿಗಳು ದಾಖಲಾಗುವ ಸಂದರ್ಭದಲ್ಲಿ ಬೆಡ್ ವ್ಯವಸ್ಥೆ ಹಾಗೂ ಅಗತ್ಯವಿದ್ದ ಪ್ರಕರಣ ಗಳಲ್ಲಿ ಅಕ್ಸಿಜನೇಟೆಡ್ ಬೆಡ್‌ಗಳ ವ್ಯವಸ್ಥೆ ಮಾಡಲು ಎಲ್ಲಾ ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ಪ್ರತಿದಿನ ಭೇಟಿ ನೀಡಿ ಪರಿಶೀಲಿಸಲು ಹಾಗೂ ಆಯಾ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕು ಬಾಧಿತ ವ್ಯಕ್ತಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಲು ಖಾಸಗಿ ಆಸ್ಪತ್ರೆ ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆಸ್ಪತ್ರೆಯ ವಿವರ ಹಾಗೂ ನೇಮಕಗೊಂಡ ನೋಡೆಲ್ ಅಧಿಕಾರಿಗಳು:

1.ಆದರ್ಶ ಆಸ್ಪತ್ರೆ ಕುಂದಾಪುರ: ಭಾನು ನಾಯ್ಕ, ಸಿದ್ಧಾಪುರ ವಾರಾಹಿ ರಿಸರ್ವ್ ಪ್ರೋಜೆಕ್ಟ್ ಉಪವಿಭಾಗದ ಸಹಾಯಕ ಅಭಿಯಂತರ (ಮೊಬೈಲ್: 9743177854).

2.ಚಿನ್ಮಯಿ ಆಸ್ಪತ್ರೆ ಕುಂದಾಪುರ: ಡಾ.ಸೂರ್ಯ ನಾರಾಯಣ ಉಪಾಧ್ಯ, ಪಶು ಸಂಗೋಪನಾ ಇಲಾಖೆ ಕುಂದಾಪುರದ ಸಹಾಯಕ ನಿರ್ದೇಶಕ (ಮೊ:9448850501).

3.ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ: ಹರ್ಷವರ್ಧನ, ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಅಭಿಯಂತರರು ಕುಂದಾಪುರ (ಮೊ:9844818655).

4.ಶ್ರೀದೇವಿ ನರ್ಸಿಂಗ್ ಹೋಮ್ ಕುಂದಾಪುರ: ಸಿ.ರಘುರಾಮ ಶೆಟ್ಟಿ, ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ವಂಡ್ಸೆ (ಮೊ:8277932519).

5.ಶ್ರೀಮಂಜುನಾಥ ಆಸ್ಪತ್ರೆ ಕೋಟೇಶ್ವರ: ಕುಸುಮಾಕರ ಶೆಟ್ಟಿ, ಯುವಜನ ಮತ್ತು ಸೇವಾ ಕ್ರೀಡಾಧಿಕಾರಿ ಕುಂದಾಪುರ (ಮೊ:9611819350).

6.ಸರ್ಜನ್ಸ್ ಹಾಸ್ಪಿಟಲ್ ಕೋಟೇಶ್ವರ: ರಾಜೇಂದ್ರ, ವಿಸ್ತರಣಾಧಿಕಾರಿ ರೇಷ್ಮೆ ಇಲಾಖೆ ಕುಂದಾಪುರ (ಮೊ:94484457831).

7.ವಿನಯ ಆಸ್ಪತ್ರೆ ಕುಂದಾಪುರ: ಅಶೋಕ್, ಸಹಾಯಕ ಅಭಿಯಂತರರು, ನಂ.1 ವಾರಾಹಿ ರಿಸರ್ವ್ ಪ್ರೋಜೆಕ್ಟ್ ಉಪವಿಭಾಗ ಸಿದ್ಧಾಪುರ (ಮೊ: 8971138955).

8.ಡಾ.ಎನ್.ಆರ್.ಆಚಾರ್ಯ ಆಸ್ಪತ್ರೆ ಕೋಟೇಶ್ವರ: ಪ್ರೀತಮ್, ಸಹಾಯಕ ಅಭಿಯಂತರ ನಂ-3 ವಾರಾಹಿ ರಿಸರ್ವ್ ಪ್ರೋಜೆಕ್ಟ್ ಉಪವಿಭಾಗ ಸಿದ್ಧಾಪುರ (ಮೊ:8277721129).

9.ಆದರ್ಶ ಆಸ್ಪತ್ರೆ ಉಡುಪಿ: ಅರುಣ್‌ಕುಮಾರ್, ಯೋಜನಾ ನಿರ್ದೇಶಕ ನಿರ್ಮಿತಿ ಕೇಂದ್ರ ಮಣಿಪಾಲ (ಮೊ:9448287341).

10.ಸಿಟಿ ಆಸ್ಪತ್ರೆ ಉಡುಪಿ: ವೀಣಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಉಡುಪಿ (ಮೊ:9611282731).

11. ಗಾಂಧಿ ಆಸ್ಪತ್ರೆ ಉಡುಪಿ: ದೇವಿಪ್ರಸಾದ್, ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ (ಮೊ:9480878012).

12.ಹೈಟೆಕ್ ಆಸ್ಪತ್ರೆ ಉಡುಪಿ: ಭುವನೇಶ್ವರಿ, ಉಪನಿರ್ದೇಶಕರು ತೋಟಗಾರಿಕಾ ಇಲಾಖೆ ಉಡುಪಿ (ಮೊ:9448999225),.

13.ಕಸ್ತೂರ್‌ಬಾ ಆಸ್ಪತ್ರೆ ಮಣಿಪಾಲ: ಅನಿತಾ ಬಿ.ಮುಂಡ್ಕೂರು, ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಉಡುಪಿ (ಮೊ:9243388835).

14.ಮಿಷನ್ ಆಸ್ಪತ್ರೆ ಉಡುಪಿ: ವಿಜಯಾ ಹೆಗ್ಡೆ, ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಮಣಿಪಾಲ (ಮೊ:9845380806).

15.ನ್ಯೂ ಸಿಟಿ ಆಸ್ಪತ್ರೆ ಉಡುಪಿ: ನಾಗಶಯನ, ಸಹಾಯಕ ಅಭಿಯಂತರರು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗ ಉಡುಪಿ (ಮೊ: 9480346084).

16. ಡಾ.ಟಿಎಂಎ ಪೈ ಆಸ್ಪತ್ರೆ ಉಡುಪಿ: ಅಶೋಕ್, ಕಾರ್ಯ ನಿರ್ವಾಹಕ ಅಭಿಯಂತರು ಲೋಕೋಪಯೋಗಿ ಇಲಾಖೆ ಉಡುಪಿ (ಮೊ: 9448624164).

17.ಪ್ರಣವ್ ಆಸ್ಪತ್ರೆ ಬ್ರಹ್ಮಾವ: ಗುರುದತ್, ಸಹಾಯಕ ಯೋಜನಾಧಿಕಾರಿ ಜಿಲ್ಲಾ ಪಂಚಾಯತ್ ಉಡುಪಿ (9964669016).

18. ಮಹೇಶ್ ಆಸ್ಪತ್ರೆ ಬ್ರಹ್ಮಾವ: ಕುಮಾರ್ ಬೆಕ್ಕೇರಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ (ಮೊ:9632959459). ನಿಯೋಜಿತ ಅಧಿಕಾರಿಗಳು ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಯಾವುದೇ ತರವಾದ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005ರಡಿ ಹಾಗೂ ಎಪಿಡಮಿಕ್ ಡಿಸೀಸಸ್ ರೆಗ್ಯುಲೇಷನ್ ಆ್ಯಕ್ಟ್‌ನಂತೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News