​ಕೋವಿಡ್ ಮಾರ್ಗಸೂಚಿ ಉಲ್ಲಂಘನೆ : ದ.ಕ.ಜಿಲ್ಲೆಯಲ್ಲಿ 56 ವಾಹನಗಳು ವಶ

Update: 2021-05-05 15:56 GMT

ಮಂಗಳೂರು, ಮೇ 5: ದ.ಕ.ಜಿಲ್ಲೆಯಲ್ಲಿ ಬುಧವಾರ ಕೋವಿಡ್ -19 ಮಾರ್ಗಸೂಚಿ ಉಲ್ಲಂಘನೆಯಡಿ 7 ಕೇಸು ದಾಖಲಿಸಲಾಗಿದೆ. ಅಲ್ಲದೆ 743 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 56 ವಾಹನ ವಶಪಡಿಸಲಾಗಿದೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 4, ಮಾಸ್ಕ್ ಉಲ್ಲಂಘನೆ 402 ಕೇಸ್, ರಾಷ್ಟ್ರೀಯ ವಿಪತ್ತು ಉಲ್ಲಂಘನೆ 9 ಮತ್ತು 48 ದ್ವಿಚಕ್ರ, 1 ತ್ರಿಚಕ್ರ, 5 ನಾಲ್ಕು ಚಕ್ರದ ವಾಹನ ಸಹಿತ 54 ವಾಹನ ವಶಪಡಿಸಲಾಗಿದೆ.

ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯ 3 ಕೇಸ್, ಮಾಸ್ಕ್ ಉಲ್ಲಂಘನೆಯ 341 ಪ್ರಕರಣ ದಾಖಲಿಸ ಲಾಗಿದೆ. 2 ವಾಹನ ವಶಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News