ಮಂಗಳೂರು ಮನಪಾ: ಆಸ್ತಿ ತೆರಿಗೆ ಪಾವತಿಯ ರಿಯಾಯಿತಿ ಅವಧಿ ವಿಸ್ತರಣೆ

Update: 2021-05-05 17:17 GMT

ಮಂಗಳೂರು, ಮೇ 5: ಮಂಗಳೂರು ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ಪಾವತಿಯ ಶೇ.5ರ ರಿಯಾಯಿತಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ತೆರಿಗೆಯನ್ನು ಎಪ್ರಿಲ್‌ನೊಳಗೆ ಪಾವತಿಸಿದರೆ ಶೇ.5ರ ರಿಯಾಯಿತಿಯ ಕೊಡುಗೆಯನ್ನು ಈ ಹಿಂದೆ ಪ್ರಕಟಿಸಲಾತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ರೋಗದ 2ನೆ ಅಲೆಯಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟವನ್ನು ಮನ ಗಂಡು ತೆರಿಗೆ ಪಾವತಿಯ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News