ಜೈಲಿನಲ್ಲಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಮುಹಮ್ಮದ್ ಅಶ್ರಫ್ ಸೆಹ್ರೈ ನಿಧನ

Update: 2021-05-05 18:18 GMT

ಶ್ರೀನಗರ, ಮೇ 5: ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್ಎ) ಅಡಿ ಬಂಧನಕ್ಕೊಳಗಾದ ಹಾಗೂ ಜಮ್ಮು ಕಾರಾಗೃಹದಲ್ಲಿದ್ದ ಹಿರಿಯ ಪ್ರತ್ಯೇಕತಾವಾದಿ ನಾಯಕ ಹಾಗೂ ತೆಹ್ರೀಕ್ ಎ ಹುರಿಯತ್ನ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಸೆಹ್ರೈ ಜಮ್ಮುವಿನ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. 

ಜಮ್ಮುವಿನ ಕೊಟ್ಬಾಲ್ವಾಲ್ ಜೈಲಿನಲ್ಲಿದ್ದ ಸೆಹ್ರೈ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ಜಮ್ಮುವಿನ ಸರಕಾರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಗಿತ್ತು. ಅವರ ಹಲವು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದರು. 77ರ ಹರೆಯದ ಸೆಹ್ರೈ ಅವರನ್ನು ಸರಕಾರ ಕಳೆದ ವರ್ಷ ಬಂಧಿಸಿತ್ತು ಹಾಗೂ ಅವರ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್ಎ) ಅಡಿ ಪ್ರಕರಣ ದಾಖಲಿಸಿತ್ತು. 

ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಅವರನ್ನು ಜಮ್ಮುವಿನ ಕೊಟ್ಬಾಲ್ವಾಲ್ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಕುಪ್ವಾರ ಜಿಲ್ಲೆಯ ಲೊಲಬ್ ಕಣಿವೆಯ ಟೆಕಿಪೋರಾ ಗ್ರಾಮದವರಾದ ಸೆಹ್ರೈ ಅವರು ಸೈಯದ್ ಅಲಿ ಗಿಲಾನಿ ಅವರು ಪ್ರತ್ಯೇಕತಾವಾದಿ ಗುಂಪಿನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಅದರ ಅಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News