ಕೇರಳದಲ್ಲಿ ಮೇ 8 ರಿಂದ 16 ರವರೆಗೆ ಲಾಕ್ ಡೌನ್

Update: 2021-05-06 06:33 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಮೇ 8ರಿಂದ 16 ರ ತನಕ ಲಾಕ್ ಡೌನ್ ವಿಧಿಸಲಾಗಿದೆ.

ರಾಜ್ಯದಲ್ಲಿ ಬುಧವಾರ 41,953 ಹೊಸ ಕೋವಿಡ್ -19 ಪ್ರಕರಣಗಳು ವರದಿ ಯಾಗಿದೆ. ಇದು  ಒಂದೇ ದಿನದಲ್ಲಿ ಆಗಿರುವ ಅತಿ ದೊಡ್ಡ ಏರಿಕೆಯಾಗಿದೆ. ಪರೀಕ್ಷೆಗಳ ಸಂಖ್ಯೆಯನ್ನು 1,63,321 ಮಾದರಿಗಳಿಗೆ ಹೆಚ್ಚಿಸಲಾಗಿದ್ದರೂ, ಪರೀಕ್ಷಿಸಿದ ಪ್ರತಿ ನಾಲ್ಕನೇ ವ್ಯಕ್ತಿಗೆ ಸೋಂಕು ತಗುಲಿರುವುದು ಕಂಡುಬಂದಿದೆ. ಪರೀಕ್ಷಾ ಸಕಾರಾತ್ಮಕ ದರವು ಶೇಕಡಾ 25.69 ರಷ್ಟಿತ್ತು.  ಒಂದೇ ದಿನದಲ್ಲಿ 58 ಸಾವುಗಳು ವರದಿಯಾಗಿವೆ. ಕೋವಿಡ್-19 ರಿಂದ ಒಟ್ಟು ಸಾವುಗಳು ಈಗ 5565 ಆಗಿದೆ.

ಕೋವಿಡ್-19 ಪ್ರಕರಣಗಳ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ ಕನಿಷ್ಠ 1000 ಟನ್ ಆಮದು ಮಾಡಿದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಮತ್ತು 50 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 25 ಲಕ್ಷ ಡೋಸ್ ಕೋವಾಕ್ಸಿನ್ ಒದಗಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರವನ್ನು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News