ಕೋವಿಡ್ ನಿಯಮ ಉಲ್ಲಂಘನೆ: ಕಾಮಿಡಿಯನ್ ಸುಗಂಧಾ ಮಿಶ್ರಾ ವಿರುದ್ಧ ಪ್ರಕರಣ ದಾಖಲು
Update: 2021-05-06 18:13 IST
ಫಾಗ್ವಾರಾ(ಚಂಡಿಗಢ): ಕಳೆದ ವಾರ ಪಂಜಾಬ್‌ನ ಫಾಗ್ವಾರಾದ ರೆಸಾರ್ಟ್‌ವೊಂದರಲ್ಲಿ ಸಂಕೇತ್ ಬೋಸ್ಲೆ ಅವರನ್ನು ವಿವಾಹವಾಗಿದ್ದ ಕಾಮಿಡಿಯನ್ ಸುಗಂಧಾ ಮಿಶ್ರಾ ಅವರ ವಿರುದ್ಧ ಕೊರೋನ ವೈರಸ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ವಿವಾಹದಲ್ಲಿ ಹೆಚ್ಚಿನ ಜನರು ಸೇರಿರುವುದನ್ನು ತೋರಿಸುವ ವೀಡಿಯೊ ವೈರಲ್ ಆದ ನಂತರ ಸುಗಂಧಾ ಮಿಶ್ರಾ, ಮದುಮಗನ ಕಡೆಯವರು, ರೆಸಾರ್ಟ್‌ನ ಮಾಲೀಕರು ಹಾಗೂ ಮದುವೆಯಲ್ಲಿ ಭಾಗವಹಿಸಿದವರ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ. ಈ ತನಕ ಯಾರನ್ನೂ ಬಂಧಿಸಲಾಗಿಲ್ಲ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪರಮ್‌ಜಿತ್ ಸಿಂಗ್ ಹೇಳಿದರು.
ಮಿಶ್ರಾ ಜಲಂಧರ್ ಮೂಲದವರಾದರೆ, ಭೋಸ್ಲೆ ಮಹಾರಾಷ್ಟ್ರದವರು. "ದಿ ಕಪಿಲ್ ಶರ್ಮಾ ಶೋ" ನಲ್ಲಿ ಇಬ್ಬರೂ ಖ್ಯಾತಿ ಗಳಿಸಿದ್ದರು,