×
Ad

ಏರ್ ಆ್ಯಂಬುಲೆನ್ಸ್ ತುರ್ತು ಲ್ಯಾಂಡಿಂಗ್, ಓರ್ವ ರೋಗಿ ಸಹಿತ ಐವರು ಪ್ರಯಾಣಿಕರು ಸುರಕ್ಷಿತ

Update: 2021-05-06 22:51 IST
Image Source : TWITTER/@HARDEEPSPURI
 

ಹೊಸದಿಲ್ಲಿ: ಏರ್ ಆ್ಯಂಬುಲೆನ್ಸ್ ಅಸಮರ್ಪಕ ಕಾರ್ಯದಿಂದಾಗಿ ತುರ್ತು ಲ್ಯಾಂಡಿಂಗ್ ಆದ ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ನಾಗ್ಪುರದಿಂದ ಹೈದರಾಬಾದ್‌ಗೆ ಹಾರಾಟ ನಡೆಸುತ್ತಿದ್ದ ಏರ್ ಆಂಬುಲೆನ್ಸ್ ಅನ್ನು ಮುಂಬೈನಲ್ಲಿ ತುರ್ತಾಗಿ ಲ್ಯಾಂಡಿಂಗ್ ಮಾಡಲಾಗಿತ್ತು.

ಜೆಟ್ ಸರ್ವ್ ಏವಿಯೇಷನ್ ​​ನಿರ್ವಹಿಸುತ್ತಿರುವ ಸಿ -90 ವಿಟಿ-ಜಿಐಎಲ್ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ತುರ್ತು ಲ್ಯಾಂಡಿಂಗ್ ಮಾಡಿದೆ. ಪೈಲಟ್ ಗಳು ಲ್ಯಾಂಡಿಂಗ್ ಗೇರ್ ಬಳಸದೆ  'ಬೆಲ್ಲಿ ಲ್ಯಾಂಡಿಂಗ್' ಮಾಡಲು ಪ್ರಯತ್ನಿಸಿದ್ದಾರೆ ಎಂದು ಸಿಬ್ಬಂದಿ ದೃಢಪಡಿಸಿದರು.

ವಿಮಾನದಲ್ಲಿ ಒಬ್ಬ ರೋಗಿ, ಇಬ್ಬರು ಸಿಬ್ಬಂದಿ,ವೈದ್ಯರು ಹಾಗೂ ಅರೆವೈದ್ಯರನ್ನು ಒಳಗೊಂಡ ವೈದ್ಯಕೀಯ ತಂಡವಿತ್ತು. ಎಲ್ಲರೂ ಗಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ರೋಗಿಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ

ಮೂಲಗಳ ಪ್ರಕಾರ, ನಾಗ್ಪುರ ವಿಮಾನ ನಿಲ್ದಾಣದಿಂದ ವಿಮಾನವು ಟೇಕ್ ಆಫ್ ಆಗುವಾಗ ವಿಮಾನದ ಒಂದು ಚಕ್ರ ಬೇರ್ಪಟ್ಟಿತು ಹಾಗೂ ಅದು ಬಿದ್ದುಹೋಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News