ಉತ್ತರಪ್ರದೇಶ: ಸಾವಿರಾರು ರೋಗಿಗಳ ಪ್ರಾಣವುಳಿಸಿದ ಹೃದ್ರೋಗ ತಜ್ಞ ಡಾ. ಫಝಲ್‌ ಕರೀಂ ಕೋವಿಡ್‌ ನಿಂದ ಮೃತ್ಯು

Update: 2021-05-06 17:49 GMT
Photo: Twitter

ಲಕ್ನೋ: ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ತನ್ನ ಬಳಿಗೆ ಬಂದ ರೋಗಿಗಳನ್ನು ಉತ್ತಮವಾಗಿ ಉಪಚರಿಸಿ ಸಮಯೋಚಿತ ಮತ್ತು ಕಡಿಮೆ ಮೆಚ್ಚದ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿದ್ದ ಡಾ. ಫಝಲ್‌ ಕರೀಂರವರು ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ೧೦ದಿನಗಳಿಗೂ ಹೆಚ್ಚು ಕಾಲ ಕೋವಿಡ್‌ ನೊಂದಿಗೆ ಸೆಣಸಾಡಿದ ಕರೀಂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಲಕ್ನೋದ ಎರಾ ಮೆಡಿಕಲ್‌ ಕಾಲೇಜಿನ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಫಝಲ್‌ ತಮ್ಮ ಸಮರ್ಪಣಾ ಮನೋಭಾವದಿಂದ ಹೆಸರುವಾಸಿಯಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಕರೆದುಕೊಂಡು ಬಂದಾಗ ಅವರು ತೀವ್ರ ನಿಗಾ ಘಟಕಕ್ಕೆ ಅತಿ ವೇಗವಾಗಿ ತೆರಳಿ ಚಿಕಿತ್ಸೆ ನೀಡುತ್ತಿದ್ದರು ಎನ್ನಲಾಗಿದೆ. 

ಡಾ. ಫಝಲ್‌ ಕರೀಂರವರ ಅಕಾಲಿಕ ನಿಧನವು ಎರಾ ಮೆಡಿಕಲ್‌ ಕಾಲೇಜಿನ ಇತರ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಘಾತವನ್ನುಂಟು ಮಾಡಿದೆ. ಅವರ ಕುರಿತಾದಂತೆ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಮೀಸಮ್‌ ಅಲಿ ಖಾನ್‌ "ಎರಾ ಲಕ್ನೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಇಎಲ್‌ಎಂಸಿ ಮತ್ತು ಎಚ್) ಕುಟುಂಬವು ಪ್ರೀತಿಯ ಸದಸ್ಯನನ್ನು ಕಳೆದುಕೊಂಡಿದೆ. ಜೀವನದಲ್ಲಿ ನಾವು ಹಲವಾರು ಉತ್ತಮ ಜನರನ್ನು ಭೇಟಿಯಾಗುತ್ತೇವೆ, ಆದರೆ ಡಾ. ಕರೀಮ್ ಎಲ್ಲರಿಗಿಂತ ಉನ್ನತ ಸ್ಥಾನದಲ್ಲಿದ್ದಾರೆ. ಅವರ ನಿಧನವು ಬಡವರಿಗೆ ಕೆಲಸ ಮಾಡುವ ನಮ್ಮ ಸಮರ್ಪಣೆಯನ್ನು ಬಲಪಡಿಸಿದೆ.” ಎಂದು ಹೇಳಿದ್ದಾರೆ.

ಹರಿಯಾಣದ ಪ್ಯಾರಾಸ್ ಕಾರ್ಡಿಯಾಕ್ ಸೈನ್ಸಸ್ ನ ಅಧ್ಯಕ್ಷ ಡಾ.ಹರೀಂದರ್ ಬಾಲಿ ಡಾ. ಕರೀಮ್ ಅವರ ಸಹೋದ್ಯೋಗಿಯಾಗಿ ತಾವು ಕಳೆದ ಕ್ಷಣಗಳನ್ನ ನೆನಪಿಸಿಕೊಂಡರು. "ಅವರು ಎರಾ ಮೆಡಿಕಲ್ ಕಾಲೇಜಿನಲ್ಲಿ ಮುಖ್ಯ ಹೃದ್ರೋಗ ತಜ್ಞರಾಗಿ ಸೇರಿಕೊಂಡರು ಮತ್ತು ಇಲಾಖೆಯನ್ನು ಹೊಸದಾಗಿ, ಉತ್ತಮವಾಗಿ ನಿರ್ಮಿಸಿದರು. ನಾನು ವೃತ್ತಿ ನಿಮಿತ್ತ ದೂರ ಸರಿದು ಅವನೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದರೂ ಸಹ, ಲಕ್ನೋ ಜನರಿಗೆ, ವಿಶೇಷವಾಗಿ ಕೆಳಮಟ್ಟದ ಸಾಮಾಜಿಕ ಆರ್ಥಿಕ ವರ್ಗಗಳಿಗೆ ಅವರು ಮಾಡುತ್ತಿರುವ ಮಹತ್ತರ ಸೇವೆಯ ಬಗ್ಗೆ ನಾನು ಆಗಾಗ್ಗೆ ಕೇಳುತ್ತಲೇ ಇದ್ದೆ" ಎಂದು ಅವರು ಹೇಳಿದರು.

ಕೋವಿಡ್‌ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಡಾ. ಫಝಲ್‌ ಕರೀಂರ ಟ್ವಿಟರ್‌ ಪೋಸ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News