×
Ad

ಕೋವಿಡ್ ವಾರಿಯರ್ ವರ್ಗದಲ್ಲಿ ಪತ್ರಕರ್ತರನ್ನೂ ಸೇರಿಸಿ: ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಆಗ್ರಹ

Update: 2021-05-06 23:37 IST

ಹೊಸದಿಲ್ಲಿ, ಮೇ 6: ಕೋವಿಡ್ ವಾರಿಯರ್ ವರ್ಗದಲ್ಲಿ ಪತ್ರಕರ್ತರನ್ನು ಕೂಡ ಸೇರಿಸಬೇಕು ಹಾಗೂ ಅವರನ್ನು ವಿಮೆ ವ್ಯಾಪ್ತಿಯೊಳಗೆ ತರಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೀಡಿದ್ದ ತನ್ನ ಶಿಫಾರಸನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಗುರುವಾರ ಮರು ಉಚ್ಚರಿಸಿದೆ.

ಕೊರೋನ ಬಿಕ್ಕಟ್ಟಿನ ಸಂದರ್ಭ ಕಠಿಣವಾಗಿ ಪರಿಶ್ರಮಿಸುತ್ತಿರುವ ಪತ್ರಕರ್ತರನ್ನು ಕೋವಿಡ್ ವಾರಿಯರ್ ವರ್ಗದಲ್ಲಿ ಗುರುತಿಸಿರುವ ಹಾಗೂ ಅವರಿಗೆ ಹಣಕಾಸು ನೆರವು ವಿಸ್ತರಿಸಿರುವ ಒಡಿಶಾ, ಬಿಹಾರ್ ಹಾಗೂ ಮಧ್ಯಪ್ರದೇಶ ಸರಕಾರವನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಶಂಸಿಸಿದೆ. ಕೋವಿಡ್ ವಾರಿಯರ್ ವರ್ಗದಲ್ಲಿ ಪತ್ರಕರ್ತರನ್ನು ಸೇರಿಸುವುದು ಹಾಗೂ ಅವರಿಗೆ ವಿಮೆ ಒದಗಿಸುವುದಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯ ಸರಕಾರಕ್ಕೆ ಮಾಡಿದ ಶಿಫಾರಸನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮರು ಉಚ್ಚರಿಸಿದೆ.

ಕಳೆದ ವರ್ಷ ಸೆಪ್ಟಂಬರ್ನ ತನ್ನ ನಿರ್ಧಾರವನ್ನು ಮರು ಉಚ್ಚರಿಸಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಹರ್ಯಾಣ ಸರಕಾರ ನೀತಿ ರೂಪಿಸಿದ ರೀತಿಯಲ್ಲೇ ಪತ್ರಕರ್ತರಿಗೆ ಗುಂಪು ವಿಮೆ ರೂಪಿಸುವಂತೆ ಹಾಗೂ ಅನುಷ್ಠಾನಗೊಳಿಸುವಂತೆ ಎಲ್ಲ ರಾಜ್ಯ ಸರಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ವೈದ್ಯರಂತೆ ಪತ್ರಕರ್ತರನ್ನು ಕೂಡ ಕೋವಿಡ್ ವಾರಿಯರ್ ವರ್ಗದಲ್ಲಿ ಸೇರಿಸುವಂತೆ, ಅವರಿಗೆ ವೈದ್ಯರಿಗೆ ನೀಡುವ ಸೌಲಭ್ಯವನ್ನೇ ನೀಡುವಂತೆ ಹಾಗೂ ಕೋವಿಡ್ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಕೂಡಲೇ ಹಣಕಾಸು ನೆರವನ್ನು ಒದಗಿಸುವಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನವಿ ಮಾಡಿದೆ. ಪತ್ರಕರ್ತರ ಕಲ್ಯಾಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೂಡ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಕೇಂದ್ರ ಸರಕಾರ, ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯ ಸರಕಾರವನ್ನು ಹೇಳಿಕೆಯಲ್ಲಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News