ಕೋವಿಡ್ ಕುರಿತು ಜನರು ಎಚ್ಚರ ಪಾಲಿಸಬೇಕು: ಸಮಸ್ತ ಕೇರಳ ಜಂಇಯ್ಯತುಲ್‌ ಉಲಮಾ ಮುಖಂಡರ ಕರೆ

Update: 2021-05-06 18:12 GMT

ಕೋಝಿಕ್ಕೋಡ್: "ಪ್ರತಿದಿನವೂ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದ್ದು, ಅತ್ಯಂತ ಭೀಕರವಾದ ಸಮಯವಾಗಿದೆ ಇದು. ವೈದ್ಯಕೀಯ ಚಿಕಿತ್ಸೆಗಳಿಗೆ ಸಂಬಂಧಪಟ್ಟಂತೆ ನಿಸ್ಸಹಾಯಕ ದಿನಗಳು ಬರಬಹುದು ಎಂದು ಆತಂಕಪಡಬೇಕಾಗಿದೆ" ಎಂದು ಸಮಸ್ತ ಕೇರಳ ಜಂಇಯ್ಯತುಲ್‌ ಉಲಮಾ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ದಿನೇ ದಿನೇ ಸೋಂಕಿತರ ಸಂಖ್ಯೆಗಳು ಹೆಚ್ಚಳವಾಗುತ್ತಿದೆ. ಹಾಗಾಗಿ ಕೋವಿಡ್ ಮಹಾಮಾರಿ ವಿಷಯದಲ್ಲಿ ಜನರು ಆದಷ್ಟು ಜಾಗೃತೆ ಪಾಲಿಸಬೇಕು. ಕೋವಿಡ್ ನಿಯಮದ ಎಲ್ಲಾ ಮಾನದಂಡಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸೈಯದ್ ಜಿಫ್ರೀ ಮುತ್ತುಕೋಯ ತಂಙಳ್, ಉಪಾಧ್ಯಕ್ಷರಾದ ಸೆಯ್ಯದ್ ಹೈದರಲಿ ಶಿಹಾಬ್ ತಂಙಳ್ ಮತ್ತು ಮುಖ್ಯ ಕಾರ್ಯದರ್ಶಿಗಳಾದ ಶೈಖುನಾ ಅಲಿಕುಟ್ಟಿ ಉಸ್ತಾದ್ ಜನರಲ್ಲಿ ವಿನಂತಿಸಿದ್ದಾಗಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News