×
Ad

ದಿಲ್ಲಿಯಲ್ಲಿ ಆಕ್ಸಿಜನ್ ಬಿಕ್ಕಟ್ಟು ಅಂತ್ಯ, 3 ತಿಂಗಳಲ್ಲಿ ಲಸಿಕೆ : ಅರವಿಂದ್ ಕೇಜ್ರಿವಾಲ್

Update: 2021-05-07 20:18 IST

ಹೊಸದಿಲ್ಲಿ: ರಾಜಧಾನಿಯ ದುರ್ಬಲ ಆಮ್ಲಜನಕದ ಕೊರತೆಯನ್ನು ಪರಿಹರಿಸಲಾಗಿದೆ.  ಮೂರು ತಿಂಗಳೊಳಗೆ ಇಡೀ ನಗರಕ್ಕೆ ಲಸಿಕೆ ಹಾಕುವ ಯೋಜನೆ ಇದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

 ಸಾವಿರಾರು ಸಾವುಗಳಿಗೆ ಕಾರಣವಾಗಿರುವ ಆಕ್ಸಿಜನ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ತಮ್ಮ ಸಂಪುಟ ಸಚಿವರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕೇಜ್ರಿವಾಲ್, "ಈಗ ದಿಲ್ಲಿಯಲ್ಲಿ ಆಮ್ಲಜನಕದ ಕೊರತೆಯಿಲ್ಲ. ಯಾವುದೇ ರೋಗಿಯು ವಂಚಿತರಾಗದಂತೆ ನಾವು ಸಾಕಷ್ಟು ಆಮ್ಲಜನಕ ಹಾಸಿಗೆಗಳನ್ನು ಹೊಂದಿರಬೇಕು" ಎಂದು ಅವರು ಉಪಮುಖ್ಯಮಂತ್ರಿ, ಆರೋಗ್ಯ ಸಚಿವರು, ಆರೋಗ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶರು ಭಾಗವಹಿಸಿದ್ದ ಸಭೆಯಲ್ಲಿ ಹೇಳಿದರು.

ಮುಂದಿನ ಮೂರು ತಿಂಗಳಲ್ಲಿ ಅರ್ಹವಾದ ಎಲ್ಲರಿಗೂ ಕೊರೋನದ ಮೂರನೇ ಅಲೆಯನ್ನು  ತಡೆಯಲು ನಗರದಲ್ಲಿ ವ್ಯಾಕ್ಸಿನೇಷನ್ ಅಭಿಯಾನವನ್ನು ಆರಂಭಿಸುವಂತೆ ಕೇಜ್ರಿವಾಲ್ ಆದೇಶ ನೀಡಿದರು ಎಂದು ಅವರ ಕಚೇರಿ ತಿಳಿಸಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪ್ರತಿದಿನ 2-4 ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News