ದ.ಕ.ಜಿಲ್ಲೆ: ಕೋವಿಶೀಲ್ಡ್ ಲಸಿಕೆ ಲಭ್ಯ

Update: 2021-05-07 16:28 GMT

ಮಂಗಳೂರು, ಮೇ 7: ದ.ಕ.ಜಿಲ್ಲೆಗೆ ಶುಕ್ರವಾರ ಪೂರೈಕೆಯಾದ ಕೋವಿಶೀಲ್ಡ್ ಲಸಿಕೆಯ ಪೈಕಿ ವೆನ್ಲಾಕ್ ಆಸ್ಪತ್ರೆಗೆ 350 ಡೋಸ್, ಮೂಡುಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 200 ಡೋಸ್, ಮುಲ್ಕಿ ಆರೋಗ್ಯ ಕೇಂದ್ರಕ್ಕೆ 200 ಡೋಸ್. ಉಳ್ಳಾಲ ಆರೋಗ್ಯ ಕೇಂದ್ರಕ್ಕೆ 180 ಡೋಸ್, ಸುರತ್ಕಲ್ ಆರೋಗ್ಯ ಕೇಂದ್ರಕ್ಕೆ 200 ಡೋಸ್ ವಿತರಿಸಲಾಗಿದೆ. ಇದನ್ನು ಮೇ 8ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೀಡಲಾಗುವುದುಲಸಿಕಾ ಶಿಬಿರ ನಡೆಯಲಿದೆ.

2ನೇ ಡೋಸ್ ಬಾಕಿ ಇರುವ ಲಸಿಕಾ ಫಲಾನುಭವಿಗಳಿಗೆ ಮಾತ್ರ ಈ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಥಮ ಡೋಸ್ ಪಡೆಯಲು ಯಾರಿಗೂ ಅವಕಾಶವಿಲ್ಲ. ಉಳಿದಂತೆ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕಾ ಶಿಬಿರ ನಡೆಯಲಿದೆ. ಆಯಾ ತಾಲೂಕು ಆರೋಗ್ಯಾಧಿಕಾರಿಗಳು/ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಮೂಲಕ ಕೋವಿಡ್ ಲಸಿಕೆಯ ಲಭ್ಯತೆಯನ್ನು ಖಾತ್ರಿಪಡಿಸಿ 2ನೇ ಡೋಸ್ ಲಸಿಕೆಯನ್ನು ಮಾತ್ರ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News