ಕೋವಿಡ್-19ನಿಂದ ಬಾಧಿತರಾದ ಚಿತ್ರರಂಗದ 25,000 ಕಾರ್ಮಿಕರಿಗೆ ಸಲ್ಮಾನ್ ಖಾನ್ ಆರ್ಥಿಕ ನೆರವು

Update: 2021-05-07 17:31 GMT

ಮುಂಬೈ: ಕೋವಿಡ್-19 ಎರಡನೇ ಅಲೆಯಿಂದ ಬಾಧಿತರಾದ ಎಲ್ಲರಿಗೂ ಸಹಾಯ  ಮಾಡಲು ಬಾಲಿವುಡ್ ಮತ್ತೆ ಒಂದಾಗಿದೆ. ಬಾಲಿವುಡ್ ಕಾರ್ಮಿಕರಿಗೆ ಸಲ್ಮಾನ್ ಖಾನ್ ಆರ್ಥಿಕ ನೆರವು ನೀಡಲಿದ್ದು, ಇದರಲ್ಲಿ ತಂತ್ರಜ್ಞರು, ಮೇಕಪ್ ಕಲಾವಿದರು, ಸ್ಟಂಟ್‌ಮೆನ್ ಮತ್ತು ಸ್ಪಾಟ್‌ಬಾಯ್‌ಗಳು ಸೇರಿದ್ದಾರೆ.

25 ಸಾವಿರ ಕಾರ್ಮಿಕರಿಗೆ ತಲಾ 1,500 ರೂ.ವನ್ನು ಸಲ್ಮಾನ್ ಖಾನ್ ದೇಣಿಗೆ ನೀಡಲಿದ್ದಾರೆ ಎಂದು  ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯನ್ ಸಿನೆ  ಎಂಪ್ಲಾಯಿಸ್ (ಎಫ್‌ವೈಸಿಇ) ಅಧ್ಯಕ್ಷ ಬಿ.ಎನ್. ತಿವಾರಿ  ENTERTAINMENT TIMES ಗೆ ದೃಢಪಡಿಸಿದರು.

"ನಾವು ಸಲ್ಮಾನ್ ಖಾನ್ ಅವರಿಗೆ ಆರ್ಥಿಕ ನೆರವಿನ ಅಗತ್ಯವಿರುವ ಕಾರ್ಮಿಕರ ಹೆಸರುಗಳ ಪಟ್ಟಿಯನ್ನು ಕಳುಹಿಸಿದ್ದೇವೆ ಹಾಗೂ  ಅವರು ಹಣವನ್ನು ಠೇವಣಿ ಮಾಡಲು ಒಪ್ಪಿದ್ದಾರೆ. 35,000 ಹಿರಿಯ  ಕಾರ್ಮಿಕರ ಪಟ್ಟಿಯನ್ನು ಯಶ್ ರಾಜ್ ಫಿಲ್ಮ್ಸ್ ಗೆ ಕಳುಹಿಸಲಾಗಿದೆ ಹಾಗೂ  ಅವರು ತಾತ್ವಿಕವಾಗಿ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ'' ಎಂದು ಬಿ.ಎನ್. ತಿವಾರಿ ತಿಳಿಸಿದರು.

ಪ್ರೊಡಕ್ಷನ್ ಹೌಸ್ 5,000 ರೂ ಹಾಗೂ  ನಾಲ್ಕು ಜನರ ಕುಟುಂಬಕ್ಕೆ ಮಾಸಿಕ ಪಡಿತರವನ್ನು ನೀಡಲಿದೆ. ಸಲ್ಮಾನ್ ಮತ್ತು ವೈಆರ್ ಎಫ್  ಇಬ್ಬರೂ ಪಟ್ಟಿಯ ಮೂಲಕ  ಖಾತೆಯ ವಿವರಗಳನ್ನು ಪರಿಶೀಲಿಸುತ್ತಾರೆ ಹಾಗೂ  ನಂತರ ಹಣವನ್ನು ಜಮಾ ಮಾಡುತ್ತಾರೆ ಎಂದು ತಿವಾರಿ ಹೇಳಿದ್ದಾರೆ.

ಇತ್ತೀಚೆಗೆ, ಸಲ್ಮಾನ್ ಖಾನ್ ಅವರು ಕೋವಿಡ್ ನ  ಮುಂಚೂಣಿಯ ವಾರಿಯರ್ಸ್ ಗಳಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ್ದರು. ನಟ, ಯುವಸೇನಾ ನಾಯಕ ರಾಹುಲ್ ಕನಲ್ ಅವರೊಂದಿಗೆ ಈ ಉಪಕ್ರಮವನ್ನು ಆರಂಭಿಸಿದ್ದರು ಹಾಗೂ  ಅವರು ಸುಮಾರು 5,000 ಮುಂಚೂಣಿ ಕಾರ್ಮಿಕರಿಗೆ ಊಟದ ಕಿಟ್‌ಗಳನ್ನು ನೀಡಿದ್ದರು, ಇದರಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News