ಕೊರೋನ ಸೋಂಕು: ಖೈದಿಗಳ ಬಿಡುಗಡೆಗೆ ಸುಪ್ರೀಂಕೋರ್ಟ್ ಸೂಚನೆ

Update: 2021-05-07 17:49 GMT

ಹೊಸದಿಲ್ಲಿ, ಮೇ 7: ದೇಶದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ದಟ್ಟಣೆ ಕಡಿಮೆಗೊಳಿಸುವ 

ನಿಟ್ಟಿನಲ್ಲಿ ಕೆಲವು ಖೈದಿಗಳಲ್ಲಿ ಪರೋಲ್ ಮೇಲೆ ಅಥವಾ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್

 ಶುಕ್ರವಾರ ರಾಜ್ಯಗಳಿಗೆ ಸೂಚಿಸಿದೆ.

ಕೊರೋನ ಸೋಂಕಿನ ಸ್ಥಿತಿ ಆತಂಕಕಾರಿಯಾಗಿದ್ದು ಜೈಲಿನಲ್ಲಿ ದಟ್ಟಣೆ ಕಡಿಮೆಗೊಳಿಸಬೇಕಿದೆ. ಸೋಂಕು ತಡೆಯುವ ಒಂದು ವಿಧಾನವಾದ ಸುರಕ್ಷಿತ 

ಅಂತರ ಪಾಲನೆ ಜೈಲಿನಲ್ಲಿ ಕಷ್ಟಸಾಧ್ಯ. ಆದ್ದರಿಂದ ಯಾವ ಖೈದಿಗಳನ್ನು ಪರೋಲ್ ಮೇಲೆ ಮತ್ತು ಯಾರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ

ಗೊಳಿಸಬಹುದು ಎಂದು ನಿರ್ಧರಿಸಲು ಪ್ರತೀ ರಾಜ್ಯದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ ಕಳೆದ ವರ್ಷದ 

ಮಾರ್ಚ್‌ನಲ್ಲಿ ಜಾರಿಗೊಳಿಸಿದ್ದ ಆದೇಶವನ್ನು ಪುನರಾವರ್ತಿಸಬಹುದು ಎಂದು ಸೂಚಿಸಿದೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ದೇಶದ ಕೊರೋನ ಸೋಂಕಿನ ಸ್ಥಿತಿಯನ್ನು ಗಮನಿಸಿ ಸುಮಾರು 45,000 ಖೈದಿಗಳನ್ನು ವಿವಿಧ ಜೈಲಿನಿಂದ 

ಬಿಡುಗಡೆಗೊಳಿಸಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಪರೋಲ್ ಮೇಲೆ ಬಿಡುಗಡೆಯಾದವರು ನಿಗದಿತ ಅವಧಿಯ ಬಳಿಕ ಜೈಲಿಗೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News