ಸಿತಾರ್ ವಾದಕ ಪ್ರತೀಕ್ ಚೌಧರಿ ಕೊರೋನ ಸೋಂಕಿನಿಂದ ನಿಧನ

Update: 2021-05-07 17:53 GMT

 ಹೊಸದಿಲ್ಲಿ, ಮೇ 7: ಖ್ಯಾತ ಸಿತಾರ್ ವಾದಕ ಪ್ರತೀಕ್ ಚೌಧರಿ(49 ವರ್ಷ) ಕೊರೋನ ಸೋಂಕಿನಿಂದ ಗುರುವಾರ ದಿಲ್ಲಿಯ ಗುರು ತೇಗ್ ಬಹಾದೂರ್ 

ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ತಂದೆ ದೇವಬ್ರತ ಚೌಧರಿಯವರೂ ಸಿತಾರ್ ವಾದಕರಾಗಿ ಖ್ಯಾತರಾಗಿದ್ದು ಕಳೆದ ವಾರ ಕೊರೋನದಿಂದ 

ಮೃತರಾಗಿದ್ದರು ಎಂದು ವರದಿಯಾಗಿದೆ.

 ಕಳೆದ ವಾರ ಸಿತಾರ್ ವಾದನದ ದಂತಕತೆ ದೇವಬ್ರತ ಚೌಧರಿ ನಮ್ಮನ್ನು ಅಗಲಿದ್ದರು. ಗುರುವಾರ ಅವರ ಪುತ್ರ, ಖ್ಯಾತ ಸಿತಾರ್ ವಾದಕ ಪ್ರತೀಕ್ 

ಚೌಧರಿ ಎಳೆಯ ಹರೆಯದಲ್ಲೇ ಇಹಲೋಕ ತ್ಯಜಿಸಿ ತಂದೆಯ ಜತೆ ಸೇರಿದ್ದಾರೆ ಎಂದು ಸಂಗೀತ ಇತಿಹಾಸಗಾರ ಪವನ್ ಝಾ ಟ್ವೀಟ್ ಮಾಡಿದ್ದಾರೆ. 

ಕೊರೋನ ಸೋಂಕಿನಿಂದ ಚೇತರಿಸಿಕೊಂಡಿದ್ದ ಪ್ರತೀಕ್ ಚೌಧರಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದ್ದಂತೆ ಹಠಾತ್ 

ಆರೋಗ್ಯ ಬಿಗಡಾಯಿಸಿ ಐಸಿಯುಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಸಿತಾರ್ ವಾದನದಲ್ಲಿ ಸೇನಿಯಾ ಘರಾನದವರಾಗಿದ್ದ ಪ್ರತೀಕ್ ದಿಲ್ಲಿ ವಿವಿಯ ಸಂಗೀತ ವಿಭಾಗದಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. 

ಅವರು ಪುತ್ರಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News