ಆಮ್ಲಜನಕ ಘಟಕಗಳನ್ನು ಸೇನೆಯ ನಿಯಂತ್ರಣಕ್ಕೆ ವಹಿಸಿ: ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಸಲಹೆ

Update: 2021-05-07 17:56 GMT

ಚಂಡೀಗಢ, ಮೇ 7: ದೇಶದಲ್ಲಿ ಆಮ್ಲಜನಕ ಘಟಕಗಳ ಸುರಕ್ಷತೆ ಮತ್ತು ಸುಲಲಿತ ಕಾರ್ಯನಿರ್ವಹಣೆಗಾಗಿ ಎಲ್ಲಾ ಆಮ್ಲಜನಕ ಉತ್ಪಾದನೆ ಘಟಕಗಳನ್ನು

ಸೇನೆ ಅಥವಾ ಅರೆಸೇನಾ ಪಡೆಗಳ ನಿಯಂತ್ರಣಕ್ಕೆ ವಹಿಸಬೇಕು ಎಂದು ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಯಾವುದೇ ಆಮ್ಲಜನಕ 

ಘಟಕ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದರೆ ಇದರಿಂದ ಹಲವು ಜೀವ ನಾಶವಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರಕಾರದ ನೆರವಿನಿಂದ ಹರ್ಯಾನದಲ್ಲಿ 60 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಬುಧವಾರ ವಿಜ್ ಹೇಳಿದ್ದರು. 

ಈ ಘಟಕಗಳನ್ನು ರಾಜ್ಯದ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು ಎಂದು ಸರಕಾರದ ಹೇಳಿಕೆ ತಿಳಿಸಿದೆ.

ಹರ್ಯಾನದಲ್ಲಿ ಕೊರೋನ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು ವೈದ್ಯಕೀಯ ಆಮ್ಲಜನಕದ ಬೇಡಿಕೆ ಹಲವು ಪಟ್ಟು ಹೆಚ್ಚಿದೆ. ಈಗ ರಾಜ್ಯ ಸರಕಾರಕ್ಕೆ 

ದಿನಾ 257 ಟನ್ ಆಮ್ಲಜನಕ ಪೂರೈಕೆಯಾಗುತ್ತಿದ್ದು ಇದನ್ನು 300 ಟನ್‌ಗಳಿಗೆ ಹೆಚ್ಚಿಸುವಂತೆ ಸರಕಾರ ಕೋರಿದೆ. ರಾಜ್ಯದ ಆಮ್ಲಜನಕ ಹಂಚಿಕೆ 

ಪ್ರಮಾಣ ಹೆಚ್ಚಿಸುವಂತೆ ಕೋರಿ ಹರ್ಯಾನ ಸರಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News