ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಕೊರೋನ ಸೋಂಕು

Update: 2021-05-07 18:17 GMT

ಮುಂಬೈ, ಮೇ 7: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದರ್ ಅವರ ಅತ್ತೆ, ಮಕ್ಕಳಾದ ವಿಹಾನ್, ಸಮಿಶಾ, ಪತಿ ರಾಜ್ ಕುಂದರ್ ಸೇರಿದಂತೆ 

ಸಂಪೂರ್ಣ ಕುಟುಂಬಕ್ಕೆ ಕೊರೋನ ಸೋಂಕು ತಗುಲಿದೆ. 

ಈ ಬಗ್ಗೆ ಶಿಲ್ಪಾ ಶೆಟ್ಟಿ ಅವರು ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘‘ನನ್ನನ್ನು ಹೊರತುಪಡಿಸಿ ಕುಟುಂಬದ ಎಲ್ಲರೂ ಕೊರೋನ ಸೋಂಕಿಗೆ ಒಳಗಾಗಿರುವುದರಿಂದ ಕಳೆದ 10 ದಿನಗಳಿಂದ ತೀವ್ರ ಒತ್ತಡ ಎದುರಿಸುತ್ತಿದ್ದೇನೆ’’

ಎಂದು ಶಿಲ್ಪಾ ಶೆಟ್ಟಿ ಕುಂದರ್ ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘‘ನನ್ನ ಕುಟುಂಬ ಮನೆಯಲ್ಲಿ ಐಸೋಲೇಶನ್‌ಗೆ ಒಳಗಾಗಿದೆ ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸುತ್ತಿದೆ. ನನ್ನ ಕುಟುಂಬ ಗುಣಮುಖವಾಗುತ್ತಿದೆ. 

ಹಾರೈಸಿದ ಎಲ್ಲರಿಗೂ ಧನ್ಯವಾದಗಳು’’ ಎಂದು ಅವರು ತಿಳಿಸಿದ್ದಾರೆ. ತನ್ನ ಇಬ್ಬರು ಸಿಬ್ಬಂದಿಗೆ ಕೂಡ ಕೊರೋನ ಸೋಂಕು ತಗುಲಿದೆ. ಅವರು

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೂಡ ಶಿಲ್ಪಾ ಶೆಟ್ಟಿ ಕುಂದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News