ಐದು ತಿಂಗಳ ಮಗುವಿನ ಚಿಕಿತ್ಸೆಗಾಗಿ 16 ಕೋ.ರೂ.ಸಂಗ್ರಹಿಸಿದ ಪೋಷಕರು!

Update: 2021-05-07 18:23 GMT

ಮುಂಬೈ: ಒಂದು ಇಂಜೆಕ್ಷನ್‌ಗೆ 16 ಕೋಟಿ ರೂ. ಪಾವತಿಸುವುದು ಸಾಮಾನ್ಯ  ಭಾರತೀಯ ಕುಟುಂಬಕ್ಕೆ ಅಸಾಧ್ಯವಾದ ಕೆಲಸ. ಆದರೆ ಗುಜರಾತಿನ  ಐದು ತಿಂಗಳ ಬಾಲಕನ ಪೋಷಕರು ಕ್ರೌಡ್ ಫಂಡಿಂಗ್ ಮೂಲಕ ಇಷ್ಟೊಂದು ಹಣ  ಸಂಗ್ರಹಿಸುವುದರಲ್ಲಿ  ಯಶಸ್ವಿಯಾಗಿದ್ದಾರೆ . ಧನ ಸಹಾಯ ಮಾಡಿ   ಔದಾರ್ಯ ಮೆರೆದ 2 ಲಕ್ಷಕ್ಕೂ ಅಧಿಕ ಜನರಿಗೆ ಈ ದಂಪತಿ  ಧನ್ಯವಾದಗಳನ್ನುತಿಳಿಸಿದೆ.

ಅಹಮದಾಬಾದ್ ಮೂಲದ ದಂಪತಿ, ತಮ್ಮ ಮಗು ಧೈರ್ಯ ರಾಜ್ ಸಿನ್ಹಾ ರಾಥೋಡ್ ಗೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಟೈಪ್ I ಎಂಬ ಅಪರೂಪದ ಆನುವಂಶಿಕ ಅಸ್ವಸ್ಥತೆಯಿದೆ  ಎಂದು ತಿಳಿದು ಆಘಾತಗೊಂಡಿತು. ಮಗು, ಜನಿಸಿದ ಸ್ವಲ್ಪ ಸಮಯದ ನಂತರ ರೋಗನಿರ್ಣಯ ಮಾಡಲಾಯಿತು.

ನರಮಂಡಲದ ಮೇಲೆ ಪರಿಣಾಮ ಬೀರುವ ಅಸ್ವಸ್ಥತೆಯಿಂದಾಗಿ, ಮಗು ಎರಡು ವರ್ಷಕ್ಕಿಂತ ಹೆಚ್ಚು ಬದುಕುವುದಿಲ್ಲ ಎಂದು ವೈದ್ಯರು ಹೇಳಿದ್ದರು. ಒಂದು ಡೋಸ್‌ಗೆ  16 ಕೋಟಿ  ರೂ. ಬೆಲೆ ಬಾಳುವ 'ಜೊಲ್ಗೆನ್ಸ್ಮಾ' ಎಂಬ ಔಷಧಿಯನ್ನು ಆಮದು ಮಾಡಿಕೊಳ್ಳಬಹುದಾದರೆ ಮಗುವನ್ನು ಉಳಿಸಿಕೊಳ್ಳಬಹುದು ಎಂದು ವೈದ್ಯರು ಹೇಳಿದ್ದರು.

"ನಾವು ಎಲ್ಲವನ್ನೂ ಮಾರಾಟ ಮಾಡಿದರೂ,  ನಮ್ಮ ಉಳಿತಾಯವನ್ನು ಖರ್ಚು ಮಾಡಿದರೂ  ಇಷ್ಟೊಂದು ಹಣ ನಮ್ಮಿಂದ  ಭರಿಸಲಾಗುತ್ತಿರಲಿಲ್ಲ" ಎಂದು ಮಗುವಿನ ತಂದೆ ರಾಜ್ ದೀಪ್ಗ್ ರಾಥೋಡ್ ಹೇಳಿದರು.

ಮುಂಬೈನ ಪಿಡಿ ಹಿಂದೂಜಾ ಆಸ್ಪತ್ರೆಯ ಮಕ್ಕಳ ನರವಿಜ್ಞಾನಿ  ಡಾ. ನೀಲು ದೇಸಾಯಿ, "ಈ ರೋಗವು 8-10,000 ಮಕ್ಕಳಲ್ಲಿ ಒಂದು ಮಗುವಿನಲ್ಲಿ ಕಂಡುಬರುತ್ತದೆ. ರೋಗಕ್ಕೆ  ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ,ಮಗುವಿನ  ಜೀವಕ್ಕೆ ದೊಡ್ಡ ಅಪಾಯವಿದೆ "ಎಂದು ಹೇಳಿದ್ದಾರೆ.

ದಂಪತಿ ಸಹಾಯಕ್ಕಾಗಿ ಕೋರಿದಾಗ  ಸಾವಿರಾರು ಅಪರಿಚಿತರು ಒಗ್ಗೂಡುತ್ತಾರೆ ಎಂದು ಅವರು ಭಾವಿಸಿರಲಿಲ್ಲ. ಕ್ರೌಡ್‌ ಫಂಡಿಂಗ್ ಪ್ಲಾಟ್‌ಫಾರ್ಮ್ ಇಂಪ್ಯಾಕ್ಟ್ ಗುರುವಿಗೆ ಈ ದಂಪತಿ ಧನ್ಯವಾದಗಳನ್ನು ಹೇಳಬೇಕಾಗುತ್ತದೆ.

ಕೇವಲ 42 ದಿನಗಳಲ್ಲಿ, ಅಮೆರಿಕದ  ಬಯೋಟೆಕ್ನಾಲಜಿ ಸ್ಟಾರ್ಟ್ಅಪ್ ಅವೆಕ್ಸಿಸ್ ಅಭಿವೃದ್ಧಿಪಡಿಸಿದ  16 ಕೋಟಿ ರೂ.ಬೆಲೆಯ  ಲಸಿಕೆ ಖರೀದಿಸಲು  2.6 ಲಕ್ಷಕ್ಕೂ ಹೆಚ್ಚು ಜನರು ಸಾಕಷ್ಟು ಹಣವನ್ನು ದಾನ ಮಾಡಿದರು.

ಅಂತಿಮವಾಗಿ, ಬುಧವಾರ, ಮಗುವಿಗೆ  ಒಂದು ಬಾರಿ ಚುಚ್ಚುಮದ್ದನ್ನು ನೀಡಲಾಯಿತು, ಇದನ್ನು ವಿಶ್ವದ ಅತ್ಯಂತ ದುಬಾರಿ ಔ ಷಧವೆಂದು ಪರಿಗಣಿಸಲಾಗಿದೆ

"ನಮಗೆ  ಕೋಟ್ಯಾಧಿಪತಿಗಳು ಮಾತ್ರವಲ್ಲ  ಸಾಮಾನ್ಯ ಜನರು ಸಹಾಯ ಮಾಡಿದ್ದಾರೆ. 2.64 ಲಕ್ಷಕ್ಕೂ ಹೆಚ್ಚು ಜನರು ಹಣವನ್ನು ನೀಡಿದರು" ಎಂದು ಮಗುವಿನ ತಂದೆ ರಾಥೋಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News