ಆಸ್ಪತ್ರೆಗೆ ದಾಖಲಾಗಲು ಕೊರೋನ ಪಾಸಿಟಿವ್ ವರದಿ ಇನ್ನು ಮುಂದೆ ಅಗತ್ಯವಿಲ್ಲ: ಕೇಂದ್ರ ಸರಕಾರ

Update: 2021-05-08 11:52 GMT

ಹೊಸದಿಲ್ಲಿ: ಆಸ್ಪತ್ರೆಗೆ ದಾಖಲಾಗಲು ಕೊರೋನವೈರಸ್ ಪಾಸಿಟಿವ್ ವರದಿಯು ಇನ್ನು ಮುಂದೆ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರವು  ತನ್ನ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

 ಇದರಿಂದಾಗಿ ಕೋವಿಡ್‌ನಿಂದ ಬಳಲುತ್ತಿರುವವರು "ತ್ವರಿತ, ಪರಿಣಾಮಕಾರಿ ಮತ್ತು ಸಮಗ್ರ ಚಿಕಿತ್ಸೆ" ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಕೊರೋನದ ಉಲ್ಬಣದ ನಡುವೆ ಸರಕಾರದ ಈ  ಹೊಸ ಕ್ರಮಗಳು ಜನರಿಗೆ ನಿಟ್ಟುಸಿರುವ ಉಂಟು ಮಾಡಿದೆ. ಹೊಸ ಮಾರ್ಗಸೂಚಿಯು  "ಯಾವುದೇ ರೋಗಿಯನ್ನು ಯಾವುದೇ ಲೆಕ್ಕದಲ್ಲಿ ನಿರಾಕರಿಸಲಾಗುವುದಿಲ್ಲ" ಎಂದು ಒತ್ತಿಹೇಳುತ್ತದೆ.

"ರಾಜ್ಯಗಳಿಗೆ ನೀಡಿದ ಮಹತ್ವದ ನಿರ್ದೇಶನದಲ್ಲಿ, ಕೇಂದ್ರ ಆರೋಗ್ಯ ಹಾಗೂ  ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ರೋಗಿಗಳನ್ನು ವಿವಿಧ ವರ್ಗದ ಸೌಲಭ್ಯಗಳಿಗೆ ಸೇರಿಸುವ ರಾಷ್ಟ್ರೀಯ ನೀತಿಯನ್ನು ಪರಿಷ್ಕರಿಸಿದೆ" ಎಂದು ಅಧಿಕೃತ ಹೇಳಿಕೆ ಶನಿವಾರ ಮಧ್ಯಾಹ್ನ ಹೊರಬಂದಿದೆ.

ಆಸ್ಪತ್ರೆಗಳು ಇನ್ನು ಮುಂದೆ ಮತ್ತೊಂದು ನಗರದ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುವುದಿಲ್ಲ.

ಸರಕಾರದ ನಿರ್ದೇಶನವನ್ನು ಎಲ್ಲಾ ರಾಜ್ಯಗಳು ಹಾಗೂ  ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗಿದೆ. ಇದನ್ನು ಕೇಂದ್ರ ಅಥವಾ ರಾಜ್ಯ ಸರಕಾರಗಳ ಅಡಿಯಲ್ಲಿರುವ ಆಸ್ಪತ್ರೆಗಳು ಅಥವಾ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ಪಾಲಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News