ಭಾರತದಾದ್ಯಂತ 9 ಲಕ್ಷಕ್ಕೂ ಅಧಿಕ ರೋಗಿಗಳು ಆಮ್ಲಜನಕ ವ್ಯವಸ್ಥೆಯಲ್ಲಿದ್ದಾರೆ: ಹರ್ಷವರ್ಧನ್

Update: 2021-05-08 14:26 GMT

ಹೊಸದಿಲ್ಲಿ: ದೇಶಾದ್ಯಂತ 1,70,841 ಕೋವಿಡ್ ರೋಗಿಗಳು ವೆಂಟಿಲೇಟರ್‌ನಲ್ಲಿದ್ದರೆ, 9,02,291 ರೋಗಿಗಳು ಆಮ್ಲಜನಕದ ವ್ಯವಸ್ಥೆಯಲ್ಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಶನಿವಾರ ತಿಳಿಸಿದ್ದಾರೆ.

ಸಾಂಕ್ರಾಮಿಕ ಪರಿಸ್ಥಿತಿ ಕುರಿತು ಚರ್ಚಿಸಲು ಮಂತ್ರಿಗಳ ಗುಂಪಿನ (ಗೋಮ್) 25 ನೇ ಸಭೆಯಲ್ಲಿ ಮಾತನಾಡಿದ ಸಚಿವರು, ಶೇ.1.34 ರಷ್ಟು ಕೋವಿಡ್ ರೋಗಿಗಳು ಐಸಿಯುನಲ್ಲಿದ್ದರೆ, ಶೇ. 0.39 ರಷ್ಟು ರೋಗಿಗಳು ವೆಂಟಿಲೇಟರ್ ಹಾಗೂ  3.70 ಪ್ರತಿಶತ ಕೋವಿಡ್ ರೋಗಿಗಳು ಆಮ್ಲಜನಕದ ವ್ಯವಸ್ಥೆಯಲ್ಲಿದ್ದಾರೆ  ಎಂದು ಹೇಳಿದರು.

ದೇಶಾದ್ಯಂತ  ಐಸಿಯು ಹಾಸಿಗೆಗಳಲ್ಲಿ ರೋಗಿಗಳ ಸಂಖ್ಯೆ 4,88,861 ಆಗಿದ್ದರೆ, 1,70,841 ರೋಗಿಗಳು ವೆಂಟಿಲೇಟರ್‌ಗಳಲ್ಲಿದ್ದಾರೆ.   9,02,291 ರೋಗಿಗಳು ಆಮ್ಲಜನಕದ ವ್ಯವಸ್ಥೆಯಲ್ಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News