ದ.ಕ.ಜಿಲ್ಲೆ: ಕೋವಿಡ್ ಗೆ ಮತ್ತೆ ಮೂವರು ಬಲಿ; 1,513 ಮಂದಿಗೆ ಕೊರೋನ ಪಾಸಿಟಿವ್

Update: 2021-05-08 16:03 GMT

ಮಂಗಳೂರು, ಮೇ 8: ದ.ಕ. ಜಿಲ್ಲೆಯಲ್ಲಿ ಶನಿವಾರ 3 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 783ಕ್ಕೇರಿದೆ. ಮೃತಪಟ್ಟವರಲ್ಲಿ ಮಂಗಳೂರು ಮತ್ತು ಬಂಟ್ವಾಳದ ಮಹಿಳೆಯರು ಸೇರಿದ್ದಾರೆ.

ಶನಿವಾರ ಜಿಲ್ಲೆಯಲ್ಲಿ 1,513 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. ಅಲ್ಲದೆ 752 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ 11,719 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಈವರೆಗೆ 7,75,602 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದ್ದು, ಆ ಪೈಕಿ 7,20,920 ಮಂದಿಯ ವರದಿ ನೆಗೆಟಿವ್ ಮತ್ತು 54,682 ಮಂದಿಯ ವರದಿ ಪಾಸಿಟಿವ್ ಬಂದಿದೆ. ಅಲ್ಲದೆ ಜಿಲ್ಲೆಯಲ್ಲಿ ಈವರೆಗೆ 42,180 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ ದ.ಕ.ಜಿಲ್ಲೆಯಲ್ಲಿ 52,519 ಪ್ರಕರಣ ದಾಖಲಿಸಲಾಗಿದೆ. 54,86,130 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ 11 ಕಡೆಗಳಲ್ಲಿ ಕಂಟೈನ್ಮೆಂಟ್ ವಲಯ ಘೋಷಣೆ

ದ.ಕ. ಜಿಲ್ಲೆಯಲ್ಲಿ ಶನಿವಾರ 11 ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಘೋಷಿಸಲ್ಪಟ್ಟ ಕಂಟೈನ್ಮೆಂಟ್ ವಲಯ ಸಂಖ್ಯೆಯು 34ಕ್ಕೇರಿದೆ.

ಬಂಟ್ವಾಳದ ಒಂದೇ ಪ್ರದೇಶದಲ್ಲಿ ಏಳು, ಮಂಗಳೂರಿನಲ್ಲಿ ಎರಡು, ಬೆಳ್ತಂಗಡಿಯಲ್ಲಿ ಎರಡು ಕಂಟೈನ್ಮೆಂಟ್ ವಲಯವನ್ನು ಶನಿವಾರ ಘೋಷಿಸಲಾಗಿದೆ. ಬಂಟ್ವಾಳದ ಅಳಿಕೆಯ ಮನೆಯೊಂದರಲ್ಲಿ 7 ಮಂದಿಗೆ, ಅಮ್ಟೂರಿನ ಮನೆಯೊಂದರಲ್ಲಿ 6 ಮಂದಿಗೆ, ಬಂಟ್ವಾಳದ ಸಂಜಯ ಗಿರಿಯಲ್ಲಿ 6 ಮಂದಿಗೆ, ಬಿ.ಸಿ.ರೋಡ್‌ನ ಪಂಚಮಿಯಲ್ಲಿ 5 ಮಂದಿಗೆ, ಬಂಟ್ವಾಳ ಬೈಪಾಸ್ ರೋಡ್‌ನಲ್ಲಿ 6 ಮಂದಿಗೆ, ಬೆಳ್ತಂಗಡಿಯ ಶಿರ್ಲಾಲು ವಿನಲ್ಲಿ 6 ಮಂದಿಗೆ, ಶಿರ್ಲಾಲು ಕರಂಬಾರುವಿನಲ್ಲಿ 9 ಮಂದಿಗೆ, ಪುಂಜಾಲಕಟ್ಟೆಯ ಕಾರಬೆಟ್ಟುವಿನಲ್ಲಿ 10 ಮಂದಿಗೆ, ಸೋಮೇಶ್ವರದ ಮನೆ ಯೊಂದರಲ್ಲಿ 6 ಮಂದಿಗೆ, ದೇರಳಕಟ್ಟೆಯ ಶಾಂತಿಧಾಮದಲ್ಲಿ 6 ಮಂದಿಗೆ ಹಾಗೂ ಪಾಸಿಟಿವ್ ಬಂದಿರುವ ಕಾರಣ ಕಂಟೈನ್ಮೆಂಟ್ ವಲಯ ಘೋಷಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News