ಕೋವಿಡ್ ಪರಿಹಾರ ಕಾರ್ಯಾಚರಣೆಗೆ ವಾಯು ಪಡೆಯ 42 ಸಾಗಾಟ ವಿಮಾನಗಳ ನಿಯೋಜನೆ

Update: 2021-05-08 18:13 GMT

ಹೊಸದಿಲ್ಲಿ, ಮೇ 8: ಭಾರೀ ಭಾರದ ಸರಕುಗಳನ್ನು ಸಾಗಿಸುವ 12 ವಿಮಾನಗಳು ಹಾಗೂ ಮಧ್ಯಮ ಭಾರದ ಸರಕುಗಳನ್ನು ಸಾಗಿಸುವ 30 ವಿಮಾನಗಳು ಸೇರಿದಂತೆ ಒಟ್ಟು 42 ಸಾಗಾಟ ವಿಮಾನಗಳನ್ನು ಕೋವಿಡ್-19 ಪರಿಹಾರ ಕಾರ್ಯಾಚರಣೆಗೆ ಭಾರತೀಯ ವಾಯು ಪಡೆ (ಐಎಎಫ್) ನಿಯೋಜಿಸಿದೆ. ‘‘ಕೋವಿಡ್ ಪರಿಹಾರ ಕಾರ್ಯಾಚರಣೆಗಾಗಿ ಐಎಎಫ್ 42 ಸಾಗಾಟ ವಿಮಾನಗಳನ್ನು ನಿಯೋಜಿಸಿದೆ.

ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಹಾಗೂ ವಿದೇಶದಿಂದ ಸರಕಗಳನ್ನು ಸಾಗಿಸಲು ಈ ವಿಮಾನಗಳನ್ನು ಬಳಕೆ ಮಾಡಲಾಗುವುದು’’ ಎಂದು ವಾಯು ಪಡೆಯ ಉಪ ಮಾರ್ಷಲ್ ಎಂ. ರಾನಾಡೆ ತಿಳಿಸಿದ್ದಾರೆ. ‘‘ಇದುವರೆಗೆ ನಾವು 75 ಆಮ್ಲಜನಕದ ಕಂಟೈನರ್ಗಳನ್ನು ಸಾಗಿಸಿದ್ದೇವೆ. ಈ ಕಾರ್ಯ ಈಗಲೂ ಪ್ರಗತಿಯಲ್ಲಿದೆ’’ ಎಂದು ರಾನಾಡೆ ಹೇಳಿದ್ದಾರೆ. ಕೋವಿಡ್ನ ಎರಡನೇ ಅಲೆಯ ಹಾವಳಿಯ ಸಂದರ್ಭ ವಿದೇಶಗಳಿಂದ ಆಮ್ಲಜನಕ ತರುವುದು ಹಾಗೂ ದೇಶದ ಒಳಗಡೆ ಆಮ್ಲಜನಕವನ್ನು ಸಾಗಾಟ ಮಾಡುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ಐಎಎಫ್ನ ವಿಮಾನಗಳು ತೊಡಗಿಕೊಂಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News