×
Ad

ಐಎನ್ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಬೆಂಕಿ ದುರಂತ; ಯಾರಿಗೂ ಅಪಾಯವಾಗಿಲ್ಲ: ನೌಕಾಪಡೆ ಹೇಳಿಕೆ

Update: 2021-05-08 23:44 IST

ಮುಂಬೈ, ಮೇ 8: ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಶನಿವಾರ ಬೆಳಿಗ್ಗೆ ಸಣ್ಣಮಟ್ಟಿನ ಬೆಂಕಿ ಅನಾಹುತ ಸಂಭವಿಸಿದೆ. ಬೆಂಕಿಯನ್ನು ನಂದಿಸಲಾಗಿದ್ದು ನೌಕೆಯಲ್ಲಿದ್ದ ಎಲ್ಲಾ ಸಿಬಂದಿಗಳೂ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆಯ ಮೂಲಗಳು ಹೇಳಿವೆ.

ಕರ್ನಾಟಕದ ಕಾರವಾರ ಬಂದರಿನಲ್ಲಿರುವ ನೌಕೆಯ ಒಂದು ಭಾಗದಲ್ಲಿ ಹೊಗೆ ಏಳುತ್ತಿರುವುದನ್ನು ಕಂಡ ಸಿಬಂದಿ ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಬಂದಿಗಳು ತಕ್ಷಣ ಬೆಂಕಿಯನ್ನು ನಂದಿಸಿದ್ದಾರೆ. ಯಾವುದೇ ಸಾವು-ನೋವು ಅಥವಾ ನಷ್ಟವಾಗಿಲ್ಲ, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ನೌಕಾಪಡೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. 2013ರಲ್ಲಿ ರಶ್ಯಾದಿಂದ ಖರೀದಿಸಿ ನವೀಕರಣಗೊಳಿಸಿರುವ ಈ ನೌಕೆ 284 ಮೀಟರ್ ಉದ್ದವಿದ್ದು 3 ಫುಟ್ಬಾಲ್ ಅಂಗಣಗಳ ಒಟ್ಟು ಅಗಲದಷ್ಟು ಅಗಲವಿದೆ. 22 ಅಟ್ಟ(ಡೆಕ್)ಗಳಿರುವ ಈ ನೌಕೆ ಸುಮಾರು 1,600 ಸಿಬಂದಿಯನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News