84 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ರಾಜ್ಯಗಳ ಬಳಿಯಿವೆ: ಕೇಂದ್ರ ಸರಕಾರ

Update: 2021-05-08 18:16 GMT

ಹೊಸದಿಲ್ಲಿ, ಮೇ 8: ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ 3 ದಿನಗಳಲ್ಲಿ 53 ಲಕ್ಷಕ್ಕೂ ಹೆಚ್ಚು ಕೊರೋನ ಸೋಂಕಿನ ಲಸಿಕೆಯನ್ನು ಪೂರೈಸಲಾಗುವುದು. ಈಗಾಗಲೇ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 84 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆಯಿದೆ ಎಂದು ಕೇಂದ್ರ ಸರಕಾರ ಶನಿವಾರ ಹೇಳಿದೆ. ಇದುವರೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 17.49 ಕೋಟಿಗೂ ಅಧಿಕ ಡೋಸ್ ಲಸಿಕೆ ಪೂರೈಸಿದ್ದು ಇದರಲ್ಲಿ ಸುಮಾರು 16.7 ಕೋಟಿ ಲಸಿಕೆಯನ್ನು ಅವರು ಬಳಸಿದ್ದಾರೆ. 84,08,187 ಡೋಸ್ ಲಸಿಕೆ ಇನ್ನೂ ಉಳಿದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೆಲವು ರಾಜ್ಯಗಳು ಪಡೆದದ್ದಕ್ಕಿಂತ ಹೆಚ್ಚು ಬಳಸಿದ ಬಗ್ಗೆ ವರದಿ ನೀಡಿವೆ. ಈ ರಾಜ್ಯಗಳು ಸಶಸ್ತ್ರ ಪಡೆಗಳಿಗೆ ರವಾನಿಸಿದ ಲಸಿಕೆಯನ್ನು ಲೆಕ್ಕ ಹಾಕದಿರುವುದರಿಂದ ಈ ವ್ಯತ್ಯಾಸ ಕಂಡುಬಂದಿದೆ. ದಿಲ್ಲಿ 40.22 ಲಕ್ಷ ಡೋಸ್ ಲಸಿಕೆ ಪಡೆದಿದ್ದು ಇದರಲ್ಲಿ 36.09 ಡೋಸ್ ಲಸಿಕೆ ಬಳಕೆಯಾಗಿದೆ. ಇನ್ನೂ 4.12 ಡೋಸ್ ಲಸಿಕೆ ಬಾಕಿಯುಳಿದಿದೆ. ಮುಂದಿನ 4 ದಿನದೊಳಗೆ ಇನ್ನೂ 1 ಲಕ್ಷ ಡೋಸ್ ಪೂರೈಸಲಾಗುವುದು. 2020ರ ಅಕ್ಟೋಬರ್ 1ರ ಪ್ರಕಾರ ದಿಲ್ಲಿಯ ಜನಸಂಖ್ಯೆ 2.04 ಕೋಟಿಯಾಗಿದೆ. ಗುಜರಾತ್ಗೆ 8.98 ಲಕ್ಷ ಲಸಿಕೆ ಡೋಸ್, ಮಹಾರಾಷ್ಟ್ರಕ್ಕೆ 6.03 ಲಕ್ಷ ಲಸಿಕೆ ಡೋಸ್ , ರಾಜಸ್ತಾನಕ್ಕೆ 4.50 ಲಕ್ಷ ಡೋಸ್ ಲಸಿಕೆ, ಉತ್ತರಪ್ರದೇಶಕ್ಕೆ 4 ಲಕ್ಷ ಡೋಸ್ ಲಸಿಕೆ, ಪ.ಬಂಗಾಳಕ್ಕೆ 3.95 ಲಕ್ಷ, ಬಿಹಾರಕ್ಕೆ 3.64 ಲಕ್ಷ , ಛತ್ತೀಸ್ಗಢಕ್ಕೆ 3 ಲಕ್ಷ ಡೋಸ್ ಲಸಿಕೆ, ಜಮ್ಮು ಕಾಶ್ಮೀರಕ್ಕೆ 84,700 ಡೋಸ್ ಲಸಿಕೆ ಒದಗಿಸಲಾಗುವುದು.
 
ಅತ್ಯಧಿಕ ಲಸಿಕೆ ವೇಸ್ಟೇಜ್(ವ್ಯರ್ಥ) ಆದ ರಾಜ್ಯವೆಂದರೆ ಲಕ್ಷದ್ವೀಪ. ಇಲ್ಲಿ 22.7% ಡೋಸ್ ಲಸಿಕೆ ವ್ಯರ್ಥವಾಗಿದೆ. ಹರ್ಯಾನದಲ್ಲಿ 6.65%, ಅಸ್ಸಾಂನಲ್ಲಿ 6.07%, ರಾಜಸ್ತಾನದಲ್ಲಿ 5.50%, ಪಂಜಾಬ್ 5.05%, ಬಿಹಾರ 4.96%, ದಾದ್ರ ಮತ್ತು ನಾಗರ್ಹವೇಲಿ 4.93%, ಮೇಘಾಲಯ- 4.215, ತಮಿಳುನಾಡು-3.94% ಮತ್ತು ಮಣಿಪುರದಲ್ಲಿ 3.56% ಡೋಸ್ ಲಸಿಕೆ ವ್ಯರ್ಥವಾಗಿದೆ ಎಂದು ಇಲಾಖೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News