ಐಸಿಯು ಬೆಡ್ ಹಂಚಿಕೆಗೆ ಲಂಚ ಆರೋಪ : ನರ್ಸ್ ಬಂಧನ

Update: 2021-05-09 04:02 GMT
ಸಾಂದರ್ಭಿಕ ಚಿತ್ರ

ಜೈಪುರ : ಸರ್ಕಾರಿ ಕೋವಿಡ್-19 ಚಿಕಿತ್ಸಾ ಕೇಂದ್ರದಲ್ಲಿ ಐಸಿಯು ಬೆಡ್ ಹಂಚಿಕೆ ಮಾಡಲು ಲಂಚ ಪಡೆದ ಆರೋಪದಲ್ಲಿ ಖಾಸಗಿ ಆಸ್ಪತ್ರೆಯ ಪುರುಷ ನರ್ಸ್ ಒಬ್ಬರನ್ನು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ಬ್ಯೂರೊ (ಎಸಿಬಿ) ಶನಿವಾರ ಬಂಧಿಸಿದೆ.

ಆರೋಪಿಯನ್ನು ಅಶೋಕ್ ಕುಮಾರ್ ಗುರ್ಜರ್ ಎಂದು ಗುರುತಿಸಲಾಗಿದೆ.

ಗುರ್ಜರ್ ಮೆಟ್ರೊ ಪಾಸ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಾಗೂ ಕೋವಿಡ್-19 ರೋಗಿಯೊಬ್ಬರಿಗೆ ರಾಜಸ್ಥಾನ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಆಸ್ಪತ್ರೆಯಲ್ಲಿ ಐಸಿಯು ಬೆಡ್ ವ್ಯವಸ್ಥೆ ಮಾಡಿಕೊಡಲು 1.30 ಲಕ್ಷ ರೂ. ಲಂಚಕ್ಕೆ ಆಗ್ರಹಿಸಿದ್ದ ಎಂದು ಎಸಿಬಿ ಪೊಲೀಸ್ ಮಹಾನಿರ್ದೇಶಕ ಬಿ.ಎಲ್.ಸೋನಿ ಹೇಳಿದ್ದಾರೆ.

ಈ ಸಂಬಂಧ ಎಸಿಬಿಗೆ ಬಂದ ದೂರನ್ನು ದೃಢೀಕರಿಸಿಕೊಂಡು, ಆರೋಪಿ ಲಂಚದ ಕಂತಾಗಿ 23 ಸಾವಿರ ರೂಪಾಯಿಯನ್ನು ಪಡೆಯುತ್ತಿದ್ದಾಗ ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News