ದೇಶದಲ್ಲಿ ಸತತ ನಾಲ್ಕನೇ ದಿನ 4 ಲಕ್ಷಕ್ಕೂ ಅಧಿಕ ಕೋವಿಡ್ ಪಾಸಿಟಿವ್

Update: 2021-05-09 05:27 GMT

ಹೊಸದಿಲ್ಲಿ: ದೇಶದಲ್ಲಿ ಸತತ ನಾಲ್ಕನೇ ದಿನ ನಾಲ್ಕು ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 4 ಸಾವಿರಕ್ಕೂ ಅಧಿಕ ಸಾವು ಸಂಭವಿಸಿದೆ.

ಶನಿವಾರ ದೇಶದಲ್ಲಿ ಏಳು ದಿನಗಳ ಸರಾಸರಿ ದೈನಿಕ ಪ್ರಕರಣಗಳ ಸಂಖ್ಯೆ 3,91,263 ಆಗಿದ್ದು, ಹಿಂದಿನ ವಾರ 20117ರಷ್ಟು ಏರಿಕೆ ಕಂಡುಬಂದಿತ್ತು. ಅದಕ್ಕೂ ಹಿಂದಿನ ವಾರ ಅಂದರೆ ಏಪ್ರಿಲ್ 24- ಮೇ 1ರ ಅವಧಿಯಲ್ಲಿ 61,173ರಷ್ಟು ಹೆಚ್ಚಿತ್ತು. ಏಪ್ರಿಲ್ 17-24ರ ಅವಧಿಯಲ್ಲಿ 1,06,024ರಷ್ಟು ಹೆಚ್ಚಿತ್ತು. ಆದಾಗ್ಯೂ ದೇಶದಲ್ಲಿ ಧನಾತ್ಮಕತೆ ದರ ಅಧಿಕವಾಗಿದ್ದು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಧನಾತ್ಮಕತೆ ದರ ಹಿಂದಿನ ವಾರದ ಕೊನೆಯ ಮೂರು ದಿನ 21% ಇದ್ದರೆ ಇದೀಗ 22% ಆಗಿದೆ.

ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶ ಮತ್ತು ಪೂರ್ವ ಭಾರತದ ಅಸ್ಸಾಂ, ಬಂಗಾಳ ಹಾಗೂ ಉತ್ತರ ಭಾರತದ ಉತ್ತರಾಖಂಡ, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಜಸ್ಥಾನ ಹಾಗೂ ಬಿಹಾರದಂಥ ರಾಜ್ಯಗಳಲ್ಲೂ ಪ್ರಕರಣಗಳ ಏರಿಕೆ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕ ಇದೆ. ಇದಕ್ಕೆ ವಿರುದ್ಧವಾಗಿ ಮಹಾರಾಷ್ಟ್ರದಲ್ಲಿ ಸಾಪ್ತಾಹಿಕ ಸರಾಸರಿ ಇಳಿಕೆಯಾಗಿದೆ. ತೀವ್ರ ಬಾಧಿತವಾಗಿರುವ ಉತ್ತರ ಪ್ರದೇಶ, ದೆಹಲಿ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಕೂಡಾ ಪ್ರಕರಣಗಳು ಇಳಿಕೆಯಾಗುತ್ತಿವೆ.

ದೇಶದಲ್ಲಿ ಶನಿವಾರ 4,01,012 ಪ್ರಕರಣಗಳು ವರದಿಯಾಗಿದ್ದು, ಹಿಂದಿನ ದಿನ ದಾಖಲಾದ 4,14,554 ಪ್ರಕರಣಗಳಿಗೆ ಹೋಲಿಸಿದರೆ ಇದು 13 ಸಾವಿರದಷ್ಟು ಕಡಿಮೆ. ಶುಕ್ರವಾರ 4187 ಸಾವು ಸಂಭವಿಸಿದ್ದರೆ, ಶನಿವಾರ 4135 ಸೋಂಕಿತರು ಮೃತಪಟ್ಟಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News