ಆಕ್ಸಿಜನ್ ಟ್ಯಾಂಕ್, ಕೋವಿಡ್ ಔಷಧಿಗಳ ಆಮದಿನ ಮೇಲೆ ತೆರಿಗೆ ವಿನಾಯಿತಿ ನೀಡಿ
Update: 2021-05-09 15:38 IST
ಕೋಲ್ಕತಾ: ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬೇಕಾದ ಔಷಧಿ ಹಾಗೂ ಸಲಕರಣೆಗಳ ಆಮದಿನ ಮೇಲೆ ತೆರಿಗೆ ವಿನಾಯಿತಿ ನೀಡುವಂತೆ ಕೋರಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಹಾಗೂ ಬಂಗಾಳ ಮತ್ತು ಭಾರತದಾದ್ಯಂತ ಕೊರೋನವೈರಸ್-ಪಾಸಿಟಿವ್ ರೋಗಿಗಳ ಚಿಕಿತ್ಸೆಗಾಗಿ ಔಷಧಿಗಳು ಹಾಗೂ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಅವರು ಪ್ರಧಾನಿಯನ್ನು ಒತ್ತಾಯಿಸಿದರು.
ಸಂಸ್ಥೆಗಳು, ವ್ಯಕ್ತಿಗಳು ಮತ್ತು ಪರೋಪಕಾರಿ ಏಜೆನ್ಸಿಗಳು ಆಮ್ಲಜನಕ ಸಾಂದ್ರಕಗಳು ಹಾಗೂ ಸಿಲಿಂಡರ್‌ಗಳಿಂದ ಆರಂಭಿಸಿ ಕ್ರಯೋಜೆನಿಕ್ ಶೇಖರಣಾ ಟ್ಯಾಂಕ್‌ಗಳು, ಕೋವಿಡ್-19 ಔಷಧಿಗಳ ತನಕ ನೆರವು ನೀಡುತ್ತಿವೆ. ಖಾಸಗಿ ನೆರವು ಪ್ರೋತ್ಸಾಹಿಸಲು ಅಂತಹ ವಸ್ತುಗಳನ್ನು ಜಿಎಸ್ ಟಿ ಹಾಗೂ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡುವಂತೆ ಮಮತಾ ಅವರು ಕೇಂದ್ರವನ್ನು ಒತ್ತಾಯಿಸಿದರು.