ಕೋವಿಡ್ ಕರ್ತವ್ಯಕ್ಕಾಗಿ ಸಶಸ್ತ್ರ ಪಡೆಗಳ 400 ನಿವೃತ್ತ ವೈದ್ಯರ ನೇಮಕಕ್ಕೆ ರಕ್ಷಣಾ ಸಚಿವಾಲಯ ಅಸ್ತು

Update: 2021-05-09 13:20 GMT

ಹೊಸದಿಲ್ಲಿ: ಕೋವಿಡ್ ಪ್ರಕರಣಗಳ ಹೆಚ್ಚಳವನ್ನು  ಗಮನದಲ್ಲಿಟ್ಟುಕೊಂಡು ಹೆಚ್ಚುತ್ತಿರುವ ಅಗತ್ಯವನ್ನು ಪೂರೈಸಲು ಸಶಸ್ತ್ರ ಪಡೆಗಳ ನಿವೃತ್ತ ವೈದ್ಯರನ್ನು ತಾತ್ಕಾಲಿಕವಾಗಿ ನೇಮಕ ಮಾಡಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.

ಮಾಜಿ ಸೇನಾ ವೈದ್ಯಕೀಯ ದಳ (ಎಎಂಸಿ) / ಶಾರ್ಟ್ ಸರ್ವಿಸ್ ಕಮಿಷನ್ (ಎಸ್‌ಎಸ್‌ಸಿ) ವೈದ್ಯಕೀಯ ಅಧಿಕಾರಿಗಳ ನೇಮಕಾತಿಗಾಗಿ ರಕ್ಷಣಾ ಸಚಿವಾಲಯವು ಜನರಲ್ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಿಗೆ (ಡಿಜಿ ಎಎಫ್‌ಎಂಎಸ್) ನಿರ್ದೇಶನ ನೀಡಿದೆ.

'ಟೂರ್ ಆಫ್ ಡ್ಯೂಟಿ' ಯೋಜನೆಯಡಿ, 2017 ಮತ್ತು 2021 ರ ನಡುವೆ ಬಿಡುಗಡೆಯಾದ 400 ಮಾಜಿ ಎಎಂಸಿ / ಎಸ್‌ಎಸ್‌ಸಿ ವೈದ್ಯಕೀಯ ಅಧಿಕಾರಿಗಳನ್ನು ಗರಿಷ್ಠ 11 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ನಿರೀಕ್ಷೆಯಿದೆ ”ಎಂದು  ರಕ್ಷಣಾ ಸಚಿವಾಲಯದ ವಕ್ತಾರ ಭಾರತ್ ಭೂಷಣ್ ಬಾಬು ತಿಳಿಸಿದ್ದಾರೆ.

ನೇಮಕಗೊಳ್ಳಬೇಕಾದ ವೈದ್ಯಕೀಯ ಅಧಿಕಾರಿಗಳು ನಾಗರಿಕ ಮಾನದಂಡಗಳ ಪ್ರಕಾರ ವೈದ್ಯಕೀಯವಾಗಿ ಸದೃಢ ವಾಗಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News