'ಆಕ್ಸಿಜನ್ ಎಕ್ಸ್‌ಪ್ರೆಸ್' ಮೂಲಕ ದೇಶದಾದ್ಯಂತ ಸುಮಾರು 4,200 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕ ವಿತರಣೆ

Update: 2021-05-09 14:11 GMT

ಹೊಸದಿಲ್ಲಿ: ‘ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ಎಪ್ರಿಲ್ 19 ರಿಂದ 268 ಕ್ಕೂ ಹೆಚ್ಚು ಟ್ಯಾಂಕರ್‌ಗಳಲ್ಲಿ ಸುಮಾರು 4,200 ಟನ್ ದ್ರವರೂಪದ ಆಮ್ಲಜನಕವನ್ನು ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ ಎಂದು ರೈಲ್ವೆ  ರವಿವಾರ ತಿಳಿಸಿದೆ.

ಇಲ್ಲಿಯವರೆಗೆ, 68 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲುಗಳು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿವೆ ಎಂದು ರೈಲ್ವೆ ಹೇಳಿದೆ.

ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ 293 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ಇಳಿಸಲಾಗಿದೆ. ಉತ್ತರಪ್ರದೇಶದಲ್ಲಿ 1,230 ಟನ್, ಮಧ್ಯಪ್ರದೇಶಕ್ಕೆ 271 ಟನ್, ಹರಿಯಾಣದಲ್ಲಿ 555 ಟನ್, ತೆಲಂಗಾಣದಲ್ಲಿ 123 ಟನ್, ರಾಜಸ್ಥಾನದಲ್ಲಿ 40 ಟನ್ ಹಾಗೂ ದಿಲ್ಲಿ ಯಲ್ಲಿ 1,679 ಟನ್ ವಿತರಿಸಲಾಗಿದೆ. ರವಿವಾರ 80 ಟನ್ ಪಡೆದ ಕಾನ್ಪುರ ಸೇರಿದಂತೆ ಹೊಸ ನಗರಗಳಿಗೆ ರೈಲ್ವೆ ಆಮ್ಲಜನಕವನ್ನು ವಿತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News