ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಕ್ಕಳಿಗೆ ಹೆಚ್ಚಿನ ರಕ್ಷಣೆ ಅಗತ್ಯ: ಸುಪ್ರೀಂ ನ್ಯಾಯಾಧೀಶ

Update: 2021-05-09 16:10 GMT
ಫೋಟೊ ಕೃಪೆ: //twitter.com/sarkarimirrorr

ಹೊಸದಿಲ್ಲಿ,ಮೇ 9: ಕೋವಿಡ್-19 ಎರಡನೇ ಅಲೆಯ ಈ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ,ರಕ್ಷಣೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಬಾಲನ್ಯಾಯ ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾ.ಎಸ್.ರವೀಂದ್ರ ಭಟ್ ಅವರು ಒತ್ತಿ ಹೇಳಿದರು.

‌ಯುನಿಸೆಫ್ ನ ಸಮನ್ವಯದೊಂದಿಗೆ ಸಮಿತಿಯು ನಡೆಸಿದ ಪುನರ್ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಕೋವಿಡ್-19 ರಿಂದಾಗಿ ತಮ್ಮ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳಿದ್ದಾರೆ. ಹೆತ್ತವರು ಆಸ್ಪತ್ರೆಗಳಲ್ಲಿ ಅಥವಾ ವೈದ್ಯಕೀಯ ನಿಗಾದಲ್ಲಿರುವುದರಿಂದ ಅವರ ರಕ್ಷಣೆಯಿಂದ ಮಕ್ಕಳು ವಂಚಿತರಾಗಿರುವ ಪ್ರಕರಣಗಳೂ ಇವೆ. ಇಂತಹ ಮಕ್ಕಳು ಈಗ ಹಿಂದೆಂದಿಗಿಂತಲೂ ಹೆಚ್ಚು ಸೋಂಕಿಗೆ ಗುರಿಯಾಗುವ ಅಪಾಯದಲ್ಲಿದ್ದಾರೆ. ಸಾಂಕ್ರಾಮಿಕದ ಎರಡನೇ ಅಲೆಯ ಸಂದರ್ಭ ಮಕ್ಕಳ ಕಾಳಜಿ ಮತ್ತು ರಕ್ಷಣೆಗಾಗಿ ಸಂಬಂಧಪಟ್ಟ ಎಲ್ಲರೂ ಸಂಘಟಿತ ಪ್ರಯತ್ನಗಳನ್ನು ಮಾಡಬೇಕಿದೆ ಎಂದು ನ್ಯಾ.ಭಟ್,ಅನಾಥ,ಪ್ರತ್ಯೇಕಗೊಂಡಿರುವ ಮತ್ತು ಒಂಟಿ ಮಕ್ಕಳ ಮಧ್ಯಂತರ ರಕ್ಷಣೆ ಅಗತ್ಯಗಳನ್ನು ಪೂರೈಸಲು ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯಕ್ಕೂ ಒತ್ತು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News