×
Ad

ಕೋವಿಡ್ ಕೇಂದ್ರಕ್ಕೆ ಅಮಿತಾಬ್ ಬಚ್ಚನ್ 2 ಕೋಟಿ ರೂ. ಕೊಡುಗೆ

Update: 2021-05-09 23:10 IST

ಹೊಸದಿಲ್ಲಿ : ದಿಲ್ಲಿಯ ರಾಕಾಬ್ ಗಂಜ್ ಗುರುದ್ವಾರದಲ್ಲಿ ಸೋಮವಾರ ತೆರೆಯಲಿರುವ ಕೋವಿಡ್-ಕೇರ್ ಸೌಲಭ್ಯಕ್ಕಾಗಿ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ 2 ಕೋ.ರೂ.  ಕೊಡುಗೆ ನೀಡಿದ್ದಾರೆ ಎಂದು ದಿಲ್ಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

 ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ ಕೇರ್ ಫೆಸಿಲಿಟಿಗಾಗಿ ಅಮಿತಾಬ್ ಬಚ್ಚನ್ ಅವರು ರೂ. 2 ಕೋಟಿ ಕೊಡುಗೆ ನೀಡಿದ್ದು, "ಸಿಖ್ಖರು ಲೆಜೆಂಡರಿ, ಅವರ ಸೇವೆಗೆ ನಮಸ್ಕಾರ" ಎಂದು ಹೇಳಿರುವುದಾಗಿ ಅಕಾಲಿ ದಳ ಪಕ್ಷದ ರಾಷ್ಟ್ರೀಯ ವಕ್ತಾರರಾದ  ಸಿರ್ಸಾ ಹೇಳಿದರು.

ವಿದೇಶದಿಂದ ಆಮ್ಲಜನಕ ಸಾಂದ್ರತೆಗಳು ಕೋವಿಡ್ ಆರೈಕೆ ಕೇಂದ್ರವನ್ನು ತಲುಪುವಂತೆ ನಟ ಖಚಿತಪಡಿಸಿಕೊಂಡಿದ್ದಾರೆ ಎಂದು  ಸಿರ್ಸಾ ಹೇಳಿದರು.
"ದಿಲ್ಲಿಯಲ್ಲಿ ಆಮ್ಲಜನಕ ಸೌಲಭ್ಯಕ್ಕಾಗಿ ಪರದಾಡುತ್ತಿರುವಾಗ, ಅಮಿತಾಬ್ ಜೀ ಪ್ರತಿ ದಿನ ನನಗೆ ಕರೆ ಮಾಡಿ  ಈ ಸೌಲಭ್ಯದ ಪ್ರಗತಿಯ ಬಗ್ಗೆ ವಿಚಾರಿಸಿದ್ದರು" ಎಂದು ಅವರು ಹೇಳಿದರು.

ರಕಾಬ್ ಗಂಜ್ ಗುರುದ್ವಾರ ಸೋಮವಾರ ತೆರೆಯಲಾಗುತ್ತಿದ್ದು, ಇದು 300 ಹಾಸಿಗೆಗಳು, ಆಮ್ಲಜನಕ ಸಾಂದ್ರಕಗಳು, ವೈದ್ಯರು, ಅರೆವೈದ್ಯರು ಮತ್ತು ಆಂಬುಲೆನ್ಸ್‌ಗಳನ್ನು ಹೊಂದಿರುತ್ತದೆ. ಎಲ್ಲಾ ಸೇವೆಗಳನ್ನು ರೋಗಿಗಳಿಗೆ ಉಚಿತವಾಗಿ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News