ಮಹಾರಾಷ್ಟ್ರ: ಕೋವಿಡ್ ಗೆದ್ದ ‌103 ವರ್ಷದ ವೃದ್ಧ

Update: 2021-05-09 18:26 GMT

ಮುಂಬೈ, ಮೇ 9: ಮಹಾರಾಷ್ಟ್ರದ ಪಾಲ್ಘಾರ್ನ 103 ವರ್ಷದ ವೃದ್ಧರೊಬ್ಬರು ಕೊರೋನ ಸೋಂಕಿನಿಂದ ಗುಣಮುಖರಾಗಿ ದೇಶದ ಗಮನ ಸೆಳೆದಿದ್ದಾರೆ. ಶಾಮರಾವ್ ಇಂಗಳೆ ಎಂಬ ಈ ವ್ಯಕ್ತಿ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಹಸನ್ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. 

ಪಾಲ್ಘಾರ್ನ ವೀರೇಂದ್ರ ನಗರ ಪ್ರದೇಶದ ವೀರೇಂದ್ರ ಇಂಗಳೆ ಕೊರೋನ ಸೋಂಕು ದೃಢಪಟ್ಟ ಬಳಿಕ ಪಾಲ್ಘಾರ್ನ ಗ್ರಾಮೀಣ ಕೊರೋನ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದ ಇಂಗಳೆ ಆಸ್ಪತ್ರೆಯ ಸಿಬಂದಿ ಮತ್ತು ನರ್ಸ್ಗಳೊಂದಿಗೆ ಹೊಂದಿಕೊಂಡಿದ್ದರು. ಕೊರೋನದಿಂದ ಚೇತರಿಸಿಕೊಂಡು ಶನಿವಾರ ಬಿಡುಗಡೆಗೊಂಡಾಗ ಪಾಲ್ಘಾರ್ ಜಿಲ್ಲಾಧಿಕಾರಿ ಡಾ. ಮಾಣಿಕ್ ಗುರ್ಸಾಲ್ ಆಸ್ಪತ್ರೆಗೆ ಬಂದು ಇಂಗಳೆಗೆ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ ಎಂದು ವರದಿಯಾಗಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News