ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಿಗೆ 3 ದಿನಗಳಲ್ಲಿ 9 ಲಕ್ಷಕ್ಕೂ ಅಧಿಕ ಕೊರೋನ ಲಸಿಕೆ ಡೋಸ್ ಪೂರೈಕೆ

Update: 2021-05-10 18:15 GMT

ಹೊಸದಿಲ್ಲಿ, ಮೇ 10: ಕೇಂದ್ರ ಸರಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಸುಮಾರು 18 ಕೋಟಿ (17,93,57,860) ಕೊರೋನ ಲಸಿಕೆಯ ಡೋಸ್ ಅನ್ನು ಪೂರೈಸಿದೆ. ಇದರಲ್ಲಿ ವ್ಯರ್ಥವಾಗಿರುವುದು ಸೇರಿದಂತೆ ಒಟ್ಟು ಬಳಕೆ 16,89,27, 797 ಡೋಸ್ಗಳು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.

  ‘‘ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ಹಾಕಲು ಪ್ರಸ್ತುತ 1 ಕೋಟಿಗೂ ಅಧಿಕ ಕೋವಿಡ್ ಲಸಿಕೆಯ ಡೋಸ್ಗಳು ಲಭ್ಯವಿವೆ’’ ಎಂದು ಅದು ತಿಳಿಸಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮುಂದಿನ ಮೂರು ದಿನಗಳಲ್ಲಿ ಲಸಿಕೆಯ ಇನ್ನೂ 9 ಲಕ್ಷ (9,24,910) ಕ್ಕಿಂತಲೂ ಅಧಿಕ ಡೋಸ್ಗಳನ್ನು ಸ್ವೀಕರಿಸಲಿವೆ. ಕೊರೋನ ಸಾಂಕ್ರಾಮಿಕ ರೋಗ ನಿರ್ವಹಣೆ ಹಾಗೂ ಕಂಟೈನ್ಮೆಂಟ್ನ ಕೇಂದ್ರ ಸರಕಾರದ ಐದು ಅಂಶಗಳ ಕಾರ್ಯತಂತ್ರದ ಲಸಿಕೆ ಕಾರ್ಯಕ್ರಮದ ಮುಖ್ಯ ಅಂಶವಾಗಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News