ಜಿ7 ಶೃಂಗಸಭೆಗೆ ಬ್ರಿಟನ್ ಪ್ರವಾಸ ರದ್ದುಪಡಿಸಿದ ಪ್ರಧಾನಿ ಮೋದಿ

Update: 2021-05-11 14:55 GMT

ಹೊಸದಿಲ್ಲಿ: ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯಿಂದಾಗಿ ಜೂನ್‌ನಲ್ಲಿ ನಡೆಯಲಿರುವ ಜಿ -7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಬ್ರಿಟನ್ ಗೆ ಪ್ರಯಾಣಿಸುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ ಎಂದು  NDTV ವರದಿ ಮಾಡಿದೆ.

ಬ್ರಿಟನ್  ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಹ್ವಾನದ ಮೇರೆಗೆ ಜೂನ್ 11-13ರಂದು ಕಾರ್ನ್‌ವಾಲ್‌ನಲ್ಲಿ ನಡೆಯಲಿರುವ  ಜಿ 7 ಶೃಂಗಸಭೆಗೆ ಪ್ರಧಾನಿ  ಮೋದಿ ಅವರು  ವಿಶೇಷ ಆಹ್ವಾನಿತರಾಗಬೇಕಿತ್ತು.

ಜಿ 7 ಶೃಂಗಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮಾಡಿದ ಆಹ್ವಾನವನ್ನು ಶ್ಲಾಘಿಸುತ್ತಾ, ಈಗಿರುವ  ಕೋವಿಡ್ ಪರಿಸ್ಥಿತಿಯನ್ನು ಗಮನಿಸಿದರೆ, ಜಿ 7 ಶೃಂಗಸಭೆಯಲ್ಲಿ ಪ್ರಧಾನಿ ಖುದ್ದಾಗಿ ಭಾಗವಹಿಸುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News