ಕೋವಿಡ್-19: ಭಾರತದಲ್ಲಿಯ ಕೋವಿಡ್ ರೂಪಾಂತರಿತ ತಳಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ

Update: 2021-05-11 16:44 GMT

ಹೊಸದಿಲ್ಲಿ, ಮೇ 11: ಭಾರತದಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಮಂಗಳವಾರ ಕೊಂಚ ಇಳಿಕೆಯಾಗಿದೆಯಾದರೂ ದೈನಂದಿನ ಸೋಂಕು ಪ್ರಕರಣಗಳ ಏಳು ದಿನಗಳ ಸರಾಸರಿ ದಾಖಲೆಯನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪತ್ತೆಯಾಗಿರುವ ರೂಪಾಂತರಿತ ವೈರಸ್ ಜಾಗತಿಕ ಕಳವಳಕ್ಕೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯು ಎಚ್ಚರಿಕೆಯನ್ನು ನೀಡಿದೆ.

ಮಂಗಳವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 3,29,942 ಹೊಸ ಪ್ರಕರಣಗಳು ಮತ್ತು 3,876 ಸಾವುಗಳು ವರದಿಯಾಗಿವೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಈಗ 22.99 ಮಿ.ಗೆ ತಲುಪಿದ್ದು,ಸಾವುಗಳ ಸಂಖ್ಯೆ 2,49,992ಕ್ಕೇರಿದೆ.
 ರೂಟರ್ಸ್ ಬಿಡುಗಡೆಗೊಳಿಸಿರುವ ಅಂಕಿಅಂಶಗಳಂತೆ ಹೊಸ ಸಾವುಗಳ ದೈನಂದಿನ ಸರಾಸರಿಯಲ್ಲಿ ಭಾರತವು ಈಗ ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ವಿಶ್ವಾದ್ಯಂತ ಪ್ರತಿದಿನ ಮೂರು ಸಾವುಗಳಲ್ಲಿ ಒಂದು ಭಾರತದಲ್ಲಿ ಸಂಭವಿಸುತ್ತಿದೆ. ಏಳು ದಿನಗಳ ದೈನಂದಿನ ಸರಾಸರಿಯು ಈಗ 3,90,995 ಪ್ರಕರಣಗಳ ದಾಖಲೆ ಎತ್ತರಕ್ಕೇರಿದೆ.

ಕಳೆದ ವರ್ಷ ಭಾರತದಲ್ಲಿ ಮೊದಲು ಪತ್ತೆಯಾದ ಕೊರೋನವೈರಸ್ ರೂಪಾಂತರವನ್ನು ಜಾಗತಿಕ ಮಟ್ಟದ ಕಳವಳಕಾರಿ ರೂಪಾಂತರವೆಂದು ವರ್ಗೀಕರಿಸಲಾಗಿದೆ ಮತ್ತು ಅದು ಹೆಚ್ಚು ಸುಲಭವಾಗಿ ಹರಡುತ್ತದೆ ಎನ್ನುವುದನ್ನು ಕೆಲವು ಪ್ರಾಥಮಿಕ ಅಧ್ಯಯನಗಳು ತೋರಿಸಿವೆ ಎಂದು ಡಬ್ಲುಎಚ್ಒ ಹೇಳಿದೆ. ಜಿನಿವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋವಿಡ್-19 ಕುರಿತು ಡಬ್ಲುಎಚ್ಒದ ತಾಂತ್ರಿಕ ಮುಖ್ಯಸ್ಥೆ ಮಾರಿಯಾ ವಾನ್ ಕೆರ್ಖೊವ್ ಅವರು, ಭಾರತದಲ್ಲಿಯ ರೂಪಾಂತರಿತ ವೈರಸ್ನ್ನು ಜಾಗತಿಕ ಮಟ್ಟದಲ್ಲಿ ಕಳವಳಕಾರಿ ಎಂದು ವರ್ಗೀಕರಿಸಲಾಗಿದೆ. ರೂಪಾಂತರಿತ ವೈರಸ್ ವೇಗವಾಗಿ ಹರಡುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News