ಮಧ್ಯಪ್ರದೇಶ: ಬಳಕೆಯಾಗದೆ ಬಿದ್ದಿರುವ ಪಿಎಂ ಕೇರ್ಸ್ ನಿಂದ ಖರೀದಿಸಿರುವ ವೆಂಟಿಲೇಟರ್‌ಗಳು !

Update: 2021-05-11 18:08 GMT

ಭೋಪಾಲ್: ಗಗನಕ್ಕೇರುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ ಜೀವ ಉಳಿಸುವ ವೈದ್ಯಕೀಯ ಉಪಕರಣವಾಗಿರುವ,  ಪಿಎಂ ಕೇರ್ಸ್ ನಿಧಿಯಡಿಯಲ್ಲಿ ಖರೀದಿಸಿದ್ದ ವೆಂಟಿಲೇಟರ್‌ಗಳು  ದೋಷಪೂರಿತವಾಗಿ ಕಂಡುಬಂದಿದೆ ಎಂದು ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ದ ಕೆಲವು ಆಸ್ಪತ್ರೆಗಳು ದೂರು ನೀಡಿವೆ.

ಭೋಪಾಲ್ ನಲ್ಲಿರುವ ಅತ್ಯಂತ ದೊಡ್ಡ ಆಸ್ಪತ್ರೆ  ಹಮೀಡಿಯಾ ಆಸ್ಪತ್ರೆ ಯಲ್ಲಿ  ಕಳೆದ ವಾರ ರೋಗಿಯೊಬ್ಬ ಮೃತಪಟ್ಟಿದ್ದ. ವೆಂಟಿಲೇಟರ್‌ನ ಸ್ಥಗಿತವು ಸಾವಿಗೆ ಕಾರಣವಾಗಿದೆ ಎಂಬ ರೋಗಿಯ ಕುಟುಂಬದ ಆರೋಪವನ್ನು ಆಸ್ಪತ್ರೆ ಆರಂಭದಲ್ಲಿ ನಿರಾಕರಿಸಿದ್ದರೆ, ಅಧಿಕಾರಿಗಳು ವೆಂಟಿಲೇಟರ್‌ಗಳ ಬಗ್ಗೆ ಆಸ್ಪತ್ರೆಯ ಆಡಳಿತಕ್ಕೆ ಪತ್ರ ಬರೆದಿದ್ದಾರೆ ಎಂದು NDTV ಕಂಡುಹಿಡಿದಿದೆ.

ಪಿಎಂ ಕೇರ್ಸ್ ಅಡಿಯಲ್ಲಿ ಖರೀದಿಸಿದ ವೆಂಟಿಲೇಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಧೀಕ್ಷಕರಿಗೆ ತಿಳಿಸುವ ವೈದ್ಯರ ಪತ್ರವೂ  NDTV ಬಳಿ ಇದೆ.

ಯಂತ್ರಗಳು ಅಗತ್ಯವಾದ ಒತ್ತಡವನ್ನು ಉಂಟುಮಾಡುತ್ತಿಲ್ಲ ಮತ್ತು ಕೆಲವೊಮ್ಮೆ ಅವು ಇದ್ದಕ್ಕಿದ್ದಂತೆ ಆಫ್ ಆಗುತ್ತವೆ, ಇದು ರೋಗಿಗಳಿಗೆ ತುಂಬಾ ಅಪಾಯಕಾರಿ ಎಂದು ವೈದ್ಯರು ಹೇಳಿದ್ದಾರೆ. ಗಂಭೀರ ಸ್ವರೂಪದಲ್ಲಿರುವ ರೋಗಿಗಳನ್ನು ನಿರ್ವಹಿಸುವುದು ಮತ್ತು ಈ ಯಂತ್ರಗಳಿಂದ ಅವರ ಜೀವವನ್ನು ಉಳಿಸುವುದು ಕಷ್ಟ. ಆದ್ದರಿಂದ ಅವರನ್ನು ಬದಲಾಯಿಸಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪಿಎಂ ಕೇರ್ಸ್ ನಿಧಿಯಡಿ ರಾಜ್ಯದ ಇತರ ಭಾಗಗಳಲ್ಲಿನ ವೆಂಟಿಲೇಟರ್‌ಗಳನ್ನುಸರಕಾರಿ  ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇದರಲ್ಲೂ ಸಹ ತೊಂದರೆ ಗಳಿವೆ. ಕೆಲವು ಆಸ್ಪತ್ರೆಗಳಲ್ಲಿ, ಅವುಗಳನ್ನು ನಿರ್ವಹಿಸಲು ಪರಿಣಿತ ವೈದ್ಯಕೀಯ ಸಿಬ್ಬಂದಿ ಇಲ್ಲದ ಕಾರಣ ಅವುಗಳನ್ನು ಬಳಸದೆ ಮೂಲೆಗೆ ಎಸೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News