ಕೇಂದ್ರದ ನಿರ್ದೇಶನದಂತೆ ಕೋವ್ಯಾಕ್ಸಿನ್ ಪೂರೈಸಲು ಭಾರತ್ ಬಯೋಟೆಕ್ ನಿರಾಕರಿಸಿದೆ: ಮನೀಶ್ ಸಿಸೋಡಿಯಾ

Update: 2021-05-12 09:44 GMT

ಹೊಸದಿಲ್ಲಿ: ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆಭಾರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್‌ನ ಅಗತ್ಯ ಡೋಸ್ ಗಳನ್ನು ದಿಲ್ಲಿಗೆ ಪೂರೈಸಲು ನಿರಾಕರಿಸಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ  ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಸೋಡಿಯಾ, ದಿಲ್ಲಿಯು ಎರಡು ಕೋವಿಡ್ ಲಸಿಕೆಗಳಾಗಿರುವ - ಕೋವಾಕ್ಸಿನ್ ಹಾಗೂ  ಕೋವಿಶೀಲ್ಡ್ ತಲಾ 67 ಲಕ್ಷ ಸೇರಿದಂತೆ ಒಟ್ಟು 1.34 ಕೋಟಿ ಡೋಸ್ ಗಳನ್ನು ಕೇಳಿತ್ತು. ಭಾರತ್ ಬಯೋಟೆಕ್ ದಿಲ್ಲಿ ಸರಕಾರಕ್ಕೆ  ಈ ಡೋಸ್ ಗಳನ್ನು ಪೂರೈಸಲು ಅಸಮರ್ಥತೆಯನ್ನು ತಿಳಿಸಿದೆ. ಏಕೆಂದರೆ ಅದು ಸಂಬಂಧಪಟ್ಟ ಸರಕಾರಿ ಅಧಿಕಾರಿಗಳ ನಿರ್ದೇಶನದಂತೆ ರವಾನೆ ಮಾಡುತ್ತಿದೆ ಎಂದರು.

ಭಾರತ್ ಬಯೋಟೆಕ್ ಕೇಂದ್ರ ಸರಕಾರಿ ಅಧಿಕಾರಿಗಳ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

"ನಿಮಗೆ ಅಗತ್ಯವಿರುವಂತೆ ಯಾವುದೇ ಹೆಚ್ಚುವರಿ ಸರಬರಾಜುಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಇತರ ರಾಜ್ಯಗಳಿಗೆ ಎಷ್ಟು ಸರಬರಾಜು ಮಾಡಲಾಗುತ್ತಿದೆ ಎಂದು ನಮಗೆ ತಿಳಿದಿಲ್ಲ. ಆದರೆ ಅವರು ಕೇಂದ್ರ ಸರಕಾರದ ಆದೇಶದಂತೆ ಸರಬರಾಜು ಮಾಡಬೇಕಾಗಿರುವುದರಿಂದ ದಿಲ್ಲಿಗೆ ಒದಗಿಸಲು ಸಾಧ್ಯವಿಲ್ಲ ಎಂದು ಅವರು ನಮಗೆ ಪತ್ರ ಬರೆದಿದ್ದಾರೆ ”ಎಂದು ಉಪ ಮುಖ್ಯಮಂತ್ರಿ  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News