×
Ad

ತೀವ್ರಗೊಂಡ ಇಸ್ರೇಲ್ ವಾಯು ದಾಳಿಗಳ ಸರಣಿ: ಗಾಝಾದಲ್ಲಿ 35‌ ಮಂದಿ ಬಲಿ

Update: 2021-05-12 13:45 IST

ಜೆರುಸಲೆಂ: ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೂ ಇಸ್ರೇಲ್ ಫೆಲೆಸ್ತೀನ್‌ ವಿರುದ್ಧದ ತನ್ನ ವಾಯುದಾಳಿಯನ್ನು ಮುಂದುವರಿಸಿದ್ದು ಬುಧವಾರ ಗಾಝಾ ಪಟ್ಟಿಯಲ್ಲಿ ಕನಿಷ್ಠ 35 ಮಂದಿ ದಾಳಿಗಳಿಗೆ ಬಲಿಯಾದರೆ ಇಸ್ರೇಲ್‍ನಲ್ಲಿ ಐದು ಮಂದಿ ಸರಣಿ ವಾಯು ದಾಳಿಗಳಿಗೆ ಬಲಿಯಾಗಿದ್ದಾರೆ.

ಬುಧವಾರ ಬೆಳಿಗ್ಗೆ  ಗಾಝಾ ಮೇಲೆ ಇಸ್ರೇಲ್‍ ಸರಣಿ ವಾಯುದಾಳಿ ನಡೆಸಿದೆ. ಅತ್ತ ಹಮಾಸ್‌ ಸಂಘಟನೆಯು ಪ್ರತಿದಾಳಿಯೆಂಬಂತೆ ರಾಕೆಟ್ ದಾಳಿಗಳನ್ನು ಟೆಲ್ ಅವೀವ್ ಹಾಗೂ ಬೀರ್ ಶೇಬಾ ಮೇಲೆ ನಡೆಸಿದ್ದಾರೆ.

ಇಸ್ರೇಲ್ ದಾಳಿಗೆ ಗಾಝಾದ ಒಂದು ಬಹುಮಹಡಿ ಕಟ್ಟಡ ಕುಸಿದಿದ್ದರೆ ಇನ್ನೊಂದು ಕಟ್ಟಡವು ಬಹಳಷ್ಟು ಹಾನಿಗೊಂಡಿದೆ. ಹಲವಾರು ಹಮಾಸ್ ಗುಪ್ತಚರ ನಾಯಕರನ್ನು ತನ್ನ ವಾಯು ದಾಳಿಯಲ್ಲಿ ಸಾಯಿಸಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಹಮಾಸ್ ಕಚೇರಿಗಳು, ಹಮಾಸ್ ನಾಯಕರುಗಳ ಮನೆಗಳ ಮೇಲೂ ರಾಕೆಟ್ ದಾಳಿ ನಡೆಸಲಾಗಿದೆ.

2014ರಿಂದೀಚೆಗೆ ಈ ಪರಿಯ ಸಂಘರ್ಷ ಎರಡೂ ಕಡೆಗಳಿಂದ ನಡೆದಿರಲಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News