ಕ್ರಿಕೆಟಿಗ ಆರ್.ಪಿ. ಸಿಂಗ್ ತಂದೆ ಶಿವಪ್ರಸಾದ್ ಕೋವಿಡ್ ನಿಂದ ನಿಧನ

Update: 2021-05-12 09:40 GMT

ಹೊಸದಿಲ್ಲಿ: ಟೀಮ್ ಇಂಡಿಯಾ  ಮಾಜಿ ವೇಗಿ ಆರ್.ಪಿ.ಸಿಂಗ್ ಅವರ ತಂದೆ ಶಿವ ಪ್ರಸಾದ್ ಸಿಂಗ್ ಅವರು ಕೋವಿಡ್ -19 ರ ಕಾರಣದಿಂದಾಗಿ ಬುಧವಾರ ನಿಧನರಾದರು.

ತನ್ನ ತಂದೆ ಕೋವಿಡ್ -19 ನಿಂದ ಬಳಲುತ್ತಿದ್ದರು ಎಂದು ಭಾರತ ದ ಮಾಜಿ ಕ್ರಿಕೆಟಿಗ ಸಾಮಾಜಿಕ ಮಾಧ್ಯಮದಲ್ಲಿ ಟಿಪ್ಪಣಿ ಹಂಚಿಕೊಂಡಿದ್ದಾರೆ.

"ಇಂದು ನನ್ನ ತಂದೆ ಶಿವ ಪ್ರಸಾದ್ ಸಿಂಗ್ ಅವರ ನಿಧನವನ್ನು ನಾವು ಅತ್ಯಂತ ದುಃಖದಿಂದ ತಿಳಿಸುತ್ತೇವೆ. ಕೋವಿಡ್‌ನಿಂದ ಬಳಲುತ್ತಿದ್ದ ಅವರು ಮೇ 12 ರಂದು ನಿಧನರಾದರು. ನನ್ನ ಪ್ರೀತಿಯ ತಂದೆಯ ಆತ್ಮಕ್ಕೆ ಶಾಂತಿ ಕೋರಿ ನೀವೆಲ್ಲರೂ ಪ್ರಾರ್ಥಿಸಿ ಎಂದು ನಾವು ನಿಮ್ಮನ್ನು ವಿನಂತಿಸುತ್ತೇವೆ. ಆರ್ ಐ ಪಿ  ಪಾಪಾ’’ ಎಂದು ಆರ್.ಪಿ. ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.

2007 ರಲ್ಲಿ ಭಾರತ ಮೊದಲ ಆವೃತ್ತಿಯ ಟಿ 20 ವಿಶ್ವಕಪ್‌  ಗೆದ್ದಾಗ ತಂಡದಲ್ಲಿದ್ದ ಆರ್.ಪಿ.ಸಿಂಗ್, ಇಂಡಿಯಾದ ಪರ  14 ಟೆಸ್ಟ್, 58 ಏಕದಿನ ಹಾಗೂ 10 ಟ್ವೆಂಟಿ -20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಅವರು 2018 ರಲ್ಲಿ ತಮ್ಮ 32 ನೇ ವಯಸ್ಸಿನಲ್ಲಿ ನಿವೃತ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News