×
Ad

ಅಯೋಧ್ಯೆ: ಗ್ರಾಮ ಚುನಾವಣೆಯಲ್ಲಿ ಊರಿನ ಏಕೈಕ ಮುಸ್ಲಿಂ ಕುಟುಂಬದ ಧಾರ್ಮಿಕ ವಿದ್ವಾಂಸನನ್ನು ಗೆಲ್ಲಿಸಿದ ಗ್ರಾಮಸ್ಥರು

Update: 2021-05-12 15:18 IST
photo: thewire

ಅಯೋಧ್ಯೆ :  ಅಯೋಧ್ಯೆ ಜಿಲ್ಲೆಯ ಹಿಂದು ಬಾಹುಳ್ಯದ ರಾಜನ್ ಪುರ್ ಗ್ರಾಮದಲ್ಲಿರುವ ಏಕೈಕ ಮುಸ್ಲಿಂ ಕುಟುಂಬದ ಸದಸ್ಯರಾಗಿರುವ  ಧಾರ್ಮಿಕ ಗುರುವೊಬ್ಬರು ಗ್ರಾಮ ಪ್ರಧಾನ ಚುನಾವಣೆಯಲ್ಲಿ ಇತರ ಆರು ಮಂದಿ ಅಭ್ಯರ್ಥಿಗಳನ್ನು ಸೋಲಿಸಿ ಅಮೋಘ ಜಯ ಗಳಿಸಿದ್ದಾರೆ.

ಈ ಪಂಚಾಯತ್ ಚುನಾವಣಾ ಜಯವನ್ನು ಹಫೀಝ್ ಅಝೀಮುದ್ದೀನ್ ಅವರು ಈದ್ ಉಡುಗೊರೆ ಎಂದೇ ನಂಬಿದ್ದಾರೆ ಹಾಗೂ ತಮ್ಮ ಜಯಕ್ಕೆ ತಮ್ಮ ಹಿಂದೂ ಸಹೋದರರು ಕಾರಣ ಎಂದು ಹೇಳುತ್ತಾರೆ. ಹಿಂದುತ್ವದ ಕೇಂದ್ರವೆಂದೇ ನಂಬಲಾಗಿರುವ ಅಯ್ಯೋಧ್ಯೆಯಲ್ಲಿ ಹಿಂದು ಪ್ರಾಬಲ್ಯದ ಗ್ರಾಮದಲ್ಲಿ ಮುಸ್ಲಿಂ ಸಮುದಾಯದವರೊಬ್ಬರು ಸಾಧಿಸಿರುವ ಈ ಜಯ ಬಹುಸಂಖ್ಯಾತ-ಅಲ್ಪಸಂಖ್ಯಾತ ಮತ ಬ್ಯಾಂಕ್ ರಾಜಕಾರಣದ ಪರಿಕಲ್ಪನೆಯನ್ನು ಪ್ರಶ್ನಿಸುವಂತಿದೆ.

ಈ ಗ್ರಾಮದಲ್ಲಿ ಅಝೀಮುದ್ದೀನ್ ಮತ್ತವರ 27 ಕುಟುಂಬ ಸದಸ್ಯರು ಮಾತ್ರ ಮುಸ್ಲಿಂ ಮತದಾರರಾಗಿದ್ದಾರೆ. ಅಝೀಮುದ್ದೀನ್ ಅವರಿಗೆ  ಒಟ್ಟು ಚಲಾಯಿತ 600 ಮತಗಳ ಪೈಕಿ 300 ಮತಗಳು ದೊರಕಿವೆ.

ವೃತ್ತಿಯಲ್ಲಿ ರೈತರಾಗಿರುವ ಅಝೀಮುದ್ದೀನ್ ಅವರು ಇಸ್ಲಾಮಿಕ್ ಮದ್ರಸಾದ ಪದವೀಧರರಾಗಿದ್ದಾರೆ. ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಮದ್ರಸಾವೊಂದರ ಶಿಕ್ಷಕರಾಗಿ ನಂತರ ತಮ್ಮ ಕುಟುಂಬದ ಜಮೀನು ನೋಡಿಕೊಳ್ಳಲೆಂದು ಅವರು ಗ್ರಾಮಕ್ಕೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News