ಕೊರೋನದ ‌ʼಭಾರತೀಯ ಪ್ರಬೇಧʼ ಎಂದು ಹೆಸರಿಸಲು ಯಾವುದೇ ಆಧಾರವಿಲ್ಲ: ಕೇಂದ್ರ ಸರಕಾರ

Update: 2021-05-12 18:32 GMT

ಹೊಸದಿಲ್ಲಿ, ಮೇ 12: ಕೊರೋನ ಸೋಂಕಿನ ರೂಪಾಂತರಿತ ತಳಿ ಬಿ.1.617ಕ್ಕೆ ಭಾರತೀಯ ಪ್ರಬೇಧ ಎಂಬ ಹೆಸರು ಬಳಸುವ ಬಗ್ಗೆ ತೀವ್ರ ಅಸಮಾಧಾನ ಸೂಚಿಸಿರುವ ಕೇಂದ್ರ ಆರೋಗ್ಯ ಇಲಾಖೆ, ವಿಶ್ವ ಆರೋಗ್ಯ ಸಂಸ್ಥೆ ತನ್ನ ದಾಖಲೆಯಲ್ಲಿ ಈ ರೂಪಾಂತರಿತ ತಳಿಯನ್ನು  ಭಾರತದ ಪ್ರಬೇಧ ಎಂದು ಹೆಸರಿಸಿಲ್ಲ ಎಂದು ಹೇಳಿದೆ.

ಬಿ.1.617 ಪ್ರಬೇಧ ಜಾಗತಿಕ ಆತಂಕದ ಪ್ರಬೇಧ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಸ್ಪಷ್ಟವಾಗಿ ಹೇಳಿದೆ. ಆದರೂ ಕೆಲವು ಮಾಧ್ಯಮಗಳಲ್ಲಿ ಇದನ್ನು ಭಾರತೀಯ ಪ್ರಬೇಧ ಎಂದು ತಪ್ಪಾಗಿ ಉಲ್ಲೇಖಿಸಲಾಗುತ್ತಿದೆ . ಇದು ಆಧಾರರಹಿತ ಮತ್ತು ಸುಳ್ಳು ಸುದ್ಧಿ ಎಂದು ಇಲಾಖೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ತನ್ನ 32 ಪುಟಗಳ ದಾಖಲೆಯಲ್ಲಿ ಇದನ್ನು ಭಾರತೀಯ ಪ್ರಬೇಧ ಎಂದು ಉಲ್ಲೇಖಿಸಿಲ್ಲ. ಅಲ್ಲದೆ, ಈ ಕುರಿತ ದಾಖಲೆಯಲ್ಲಿ ಎಲ್ಲಿ ಕೂಡಾ ಭಾರತೀಯ ಎಂಬ ಪದದ ಬಳಕೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News