×
Ad

ರಶ್ಯದ ಸ್ಪುಟ್ನಿಕ್ ಲಸಿಕೆ ಭಾರತದಲ್ಲಿ ಮುಂದಿನ ವಾರ ಲಭ್ಯ

Update: 2021-05-13 17:03 IST

ಹೊಸದಿಲ್ಲಿ: ರಶ್ಯದ ಸ್ಪುಟ್ನಿಕ್  ಲಸಿಕೆ ಭಾರತವನ್ನು  ತಲುಪಿದ್ದು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಲಸಿಕೆಯ ಮೊದಲ ಬ್ಯಾಚ್ ಈಗಾಗಲೇ ಬಂದಿದ್ದು, ಇನ್ನಷ್ಟು ರಶ್ಯದಿಂದ ಆಗಮಿಸಲಿದೆ.

ಜುಲೈನಿಂದ ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಸಹ ತಯಾರಾಗಲಿದೆ.  ರಶ್ಯದ ಲಸಿಕೆಯ 15.6 ಕೋಟಿ ಡೋಸ್ ಗಳನ್ನು  ಉತ್ಪಾದಿಸಲು ಭಾರತ  ಎದುರು ನೋಡುತ್ತಿದೆ.

"ಮುಂದಿನ ಐದು ತಿಂಗಳಲ್ಲಿ ನಾವು 2 ಬಿಲಿಯನ್ ಡೋಸ್ [ಸ್ಪುಟ್ನಿಕ್ ವಿ] ಅನ್ನು ಹೊಂದಲಿದ್ದೇವೆ . ಇದನ್ನು ಭಾರತ ತಯಾರಿಸಲಿದೆ ಹಾಗೂ  ಭಾರತ ಬಳಸುತ್ತದೆ’’ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News