ಆಮ್ಲಜನಕದ ಕೊರತೆ: ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಇನ್ನೂ 15 ರೋಗಿಗಳು ಮೃತ್ಯು
Update: 2021-05-13 17:59 IST
ಪಣಜಿ: ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಅನಿಯಮಿತ ಪೂರೈಕೆಯನ್ನು ಸರಿಪಡಿಸಲು ರಾಜ್ಯ ಸರಕಾರ ವಿಫಲವಾದ ಕಾರಣ ಗುರುವಾರ ಸುಮಾರು 15 ಮಂದಿ ಕೋವಿಡ್ -19 ರೋಗಿಗಳು ಬೆಳಗ್ಗಿನ ಜಾವ 2 ರಿಂದ 6 ರವರೆಗೆ ಸಾವನ್ನಪ್ಪಿದ್ದಾರೆ.
ಮುಂಜಾನೆ 1: 25 ರ ಸುಮಾರಿಗೆ ರೋಗಿಗಳ ಸಂಬಂಧಿಕರು ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಮಟ್ಟ ಕುಸಿಯುತ್ತಿದೆ ಎಂದು ಎಸ್‌ಒಎಸ್ ಕಾಲ್‌ಗಳನ್ನು ಮಾಡಲು ಪ್ರಾರಂಭಿಸಿದಾಗ ಬಿಕ್ಕಟ್ಟು ಬೆಳಕಿಗೆ ಬಂದಿತ್ತು.
145, 144, 146, 143,149 ವಾರ್ಡ್‌ಗಳಲ್ಲಿ ಆಮ್ಲಜನಕದ ಕೊರತೆ ಇದೆ ಎಂಬ ವರದಿಗಳು ಮುಂಜಾನೆ 2.10 ಕ್ಕೆ ದೃಢೀಕರಿಸಲ್ಪಟ್ಟವು. ಕೇವಲ ಮೂರು ಸಿಲಿಂಡರ್‌ಗಳು ಮಾತ್ರ ಉಳಿದಿವೆ ಎಂದು ವಾರ್ಡ್ 147 ರ ವೈದ್ಯರು ತಿಳಿಸಿದ್ದಾರೆ. ಇಂದು ರಾತ್ರಿ ಎರಡನೇ ಬಾರಿಗೆ ಡ್ರಾಪ್ ಸಂಭವಿಸಿದೆ.