ಸೆಕೆಂಡ್ ಹ್ಯಾಂಡ್ ಕಾರಿಗಾಗಿ ಮಗುವನ್ನೇ ಮಾರಾಟ ಮಾಡಿದ ದಂಪತಿ!

Update: 2021-05-14 13:41 GMT

ಲಕ್ನೊ: ವಿಲಕ್ಷಣ ಘಟನೆಯೊಂದರಲ್ಲಿ  ಉತ್ತರ ಪ್ರದೇಶದ ದಂಪತಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ತಮ್ಮ ಮೂರು ತಿಂಗಳ ಗಂಡು ಮಗುವನ್ನು 1.5 ಲಕ್ಷ ರೂ. ಮಾರಾಟ ಮಾಡಿದ್ದಾರೆ.

ಮಾಧ್ಯಮ ವರದಿಯ ಪ್ರಕಾರ, ಮಗುವಿನ ತಾಯಿಯ ಅಜ್ಜ-ಅಜ್ಜಿಯಂದಿರು ಗುರುವಾರ ಪೋಷಕರ ವಿರುದ್ಧ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಕನ್ನೌಜ್‌ನ ತಿರ್ವಾ ಕೊಟ್ವಾಲಿ ಪೊಲೀಸ್ ಠಾಣೆ ನಿವಾಸಿಗಳಾಗಿರುವ ಪೋಷಕರು ತಮ್ಮ ಮೂರು ತಿಂಗಳ ಮಗುವನ್ನು ಗುರ್ಸಾಹೈಗಂಜ್ ಮೂಲದ ಉದ್ಯಮಿಗಳಿಗೆ 1.5 ಲಕ್ಷ ರೂ.ಗೆ  ನಾಲ್ಕು ಚಕ್ರ ವಾಹನವನ್ನು ಖರೀದಿಸಲು ಮಾರಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

"ಮಗು ಇನ್ನೂ ವ್ಯಾಪಾರಿ ಬಳಿ ಇರುವಾಗ, ನಾವು ಶುಕ್ರವಾರ ಮಹಿಳೆ ಮತ್ತು ಆಕೆಯ ಪತಿಯನ್ನು ವಿಚಾರಣೆಗೆ ಕರೆದಿದ್ದೇವೆ" ಎಂದು ಕೊಟ್ವಾಲಿ ಇನ್ಸ್‌ಪೆಕ್ಟರ್ ಶೈಲೇಂದ್ರ ಕುಮಾರ್ ಮಿಶ್ರಾ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News