ಕೇರಳ ವಿಧಾನ ಸಭೆಯ ಮಾಜಿ ಉಪ ಸ್ಪೀಕರ್ ಕುಂಜು ನಿಧನ
Update: 2021-05-14 23:51 IST
ಕೊಚ್ಚಿ, ಮೇ 14: ಕೇರಳ ವಿಧಾನ ಸಭೆಯ ಮಾಜಿ ಉಪ ಸ್ಪೀಕರ್ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ನಾಯಕ ಕೆ.ಎಂ. ಹಂಝ ಕುಂಜು ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅವರಿಗೆ 80 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ಗುರುವಾರ ಸುಮಾರು 9.30ಕ್ಕೆ ನಿಧನರಾದರು ಎಂದು ಅವರು ತಿಳಿಸಿದ್ದಾರೆ.
ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕೊಚ್ಚಿಯ ಮಾಜಿ ಮೇಯರ್ ಆಗಿದ್ದ ಅವರು ಕೇರಳ ವಿಧಾನ ಸಭೆಯ ಉಪ ಸ್ಪೀಕರ್ ಆಗಿ 1982ರಲ್ಲಿ ಆಯ್ಕೆಯಾಗಿದ್ದರು.
ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಅವರು ರಾಜಕೀಯ ಹಾಗೂ ಕಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರು. 1973ರಲ್ಲಿ ಎರಡೂವರೆ ವಷಗಳ ಕಾಲ ಅವರು ಕೊಚ್ಚಿಯ ಮೇಯರ್ ಆಗಿದ್ದರು.