'ತೌಕ್ತೆ' ಚಂಡಮಾರುತ; ದ.ಕ.ಜಿಲ್ಲೆಯಲ್ಲಿ ಭಾರೀ ಮಳೆ, ತತ್ತರಿಸಿದ ಜನತೆ

Update: 2021-05-15 04:17 GMT

ಮಂಗಳೂರು, ಮೇ 15: ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡ 'ತೌಕ್ತೆ' ಚಂಡಮಾರುತದ ಪರಿಣಾಮದಿಂದ ದ.ಕ.ಜಿಲ್ಲಾದ್ಯಂತ ಶನಿವಾರ ಮುಂಜಾನೆಯಿಂದ ಬಿರುಸಿನ ಮಳೆಯಾಗಿದೆ. ಸತತ ನಾಲ್ಕು‌ ಗಂಟೆಗಳ ಕಾಲ ಎಡೆಬಿಡದೆ ‌ಸುರಿದ ಮಳೆಯಿಂದಾಗಿ ‌ಜನತೆ ಅಕ್ಷರಶಃ ತತ್ತರಿಸಿದರು.

ಕೊರೋನ‌ ಲಾಕ್‌ಡೌನ್ ಹಿನ್ನೆಲೆಯಲ್ಲಿ ‌ವಾರಾಂತ್ಯ‌ ಕರ್ಪ್ಯೂ ತೆರವುಗೊಳಿಸಿದ್ದರಿಂದ ಕಾರ್ಮಿಕ ವರ್ಗವು‌‌ ನಿರ್ಮಾಣ ಕಾಮಗಾರಿ ಸಹಿತ ಇತರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು‌ ಸಿದ್ಧರಾಗಿದ್ದರೂ ಮಳೆಯಿಂದಾಗಿ‌ ಎಲ್ಲವನ್ನೂ ‌ಸ್ಥಗಿತಗೊಳಿಸಿದರು.

ಮಳೆಯಿಂದಾಗಿ ಅಗತ್ಯ ವಸ್ತುಗಳ ಖರೀದಿಸಲಾಗದೆ ಜನರು ತತ್ತರಿಸಿದರು. ಜಿಲ್ಲೆಯ ನಗರ ಮತ್ತು ಗ್ರಾಮಾಂತರದಲ್ಲಿ ಭಾರೀ ಮಳೆಯಾಗಿದ್ದು, ಉಳ್ಳಾಲ ಸಹಿತ ಕಡಲ ತೀರದ ಅನೇಕ ಕಡೆ ಪ್ರಕ್ಷ್ಯುಬ್ಧ ವಾತಾವರಣ ಇದೆ. ಕಡಲ ಅಲೆಗಳ ಆರ್ಭಟ ಅತಿಯಾಗಿದೆ. ನಗರದಲ್ಲಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರು‌ ರಸ್ತೆಯಲ್ಲೇ ಹರಿದ ಪರಿಣಾಮ ಜನರು, ವಾಹನಿಗರು‌ ಸಮಸ್ಯೆಗೀಡಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News