ಕೊರೋನ ದೈನಂದಿನ ಪ್ರಕರಣ:,ಮಹಾರಾಷ್ಟ್ರವನ್ನು ಹಿಂದಿಕ್ಕಿದ ಕರ್ನಾಟಕ

Update: 2021-05-15 06:02 GMT

ಹೊಸದಿಲ್ಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ  ಹೊಸ  3,26,098 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳ ಪೈಕಿ  41,779 ಪ್ರಕರಣಗಳೊಂದಿಗೆ ಕರ್ನಾಟಕ ಮೊದಲ ಸ್ಥಾನಕ್ಕೇರಿದ್ದು, ಮಹಾರಾಷ್ಟ್ರವನ್ನು ಹಿಂದಿಕ್ಕಿದೆ.

39,923 ಪ್ರಕರಣಗಳೊಂದಿಗೆ ಮಹಾರಾಷ್ಟ್ರ 2ನೇ ಹಾಗೂ  34,694 ಪ್ರಕರಣಗಳೊಂದಿಗೆ ಕೇರಳ ಮೂರನೇ ಸ್ಥಾನದಲ್ಲಿವೆ. ತಮಿಳುನಾಡು 31,892 ಪ್ರಕರಣಗಳು ಮತ್ತು ಆಂಧ್ರಪ್ರದೇಶದಲ್ಲಿ 22,018 ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಭಾರತ 3,890 ಸಾವುನೋವುಗಳನ್ನು ದಾಖಲಿಸಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವುನೋವು (695) ಸಂಭವಿಸಿದ್ದು, ನಂತರ ಕರ್ನಾಟಕದಲ್ಲಿ 373 ಸಾವುಗಳು ಸಂಭವಿಸಿವೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳಲ್ಲಿ 31,000 ರಷ್ಟು ಕುಸಿತವನ್ನು ದಾಖಲಿಸಿದೆ, ಸಕ್ರಿಯ ಪ್ರಕರಣವು ಈಗ 36,73,802 ರಷ್ಟಿದೆ.

ಗರಿಷ್ಠ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ. ಹೊಸ ಪ್ರಕರಣಗಳಲ್ಲಿ ಶೇ 12.81 ರಷ್ಟು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಸಕಾರಾತ್ಮಕ (ಪಾಸಿಟಿವಿಟಿ) ದರವು ಕುಸಿಯುತ್ತಿದೆ. ಆದರೆ ಕರ್ನಾಟಕದಲ್ಲಿ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News