ಥಾಣೆ: ಕಟ್ಟಡದ ಸ್ಲ್ಯಾಬ್ ಕುಸಿದು ಕನಿಷ್ಠ ನಾಲ್ಕು ಮಂದಿ ಮೃತ್ಯು

Update: 2021-05-15 15:07 GMT
ಸಾಂದರ್ಭಿಕ ಚಿತ್ರ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‌ನಗರದ ಟೌನ್‌ಶಿಪ್‌ನಲ್ಲಿರುವ ವಸತಿ ಕಟ್ಟಡದ ಸ್ಲ್ಯಾಬ್ ಗಳು ಶನಿವಾರ ಕುಸಿದು ಪರಿಣಾಮ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. 11 ಜನರನ್ನು ರಕ್ಷಿಸಲಾಗಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾಗಿರುವ  ಕಟ್ಟಡದ ನಿವಾಸಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಸಂತೋಷ್ ಕದಮ್ ತಿಳಿಸಿದ್ದಾರೆ.

ನೆಲ ಅಂತಸ್ತಿನ ಜೊತೆಗೆ ನಾಲ್ಕು ಅಂತಸ್ತಿನ "ಮನೋರಮಾ" ಕಟ್ಟಡದಲ್ಲಿ ಮಧ್ಯಾಹ್ನ 1.40 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.

ನಾಲ್ಕನೇ ಮಹಡಿಯಲ್ಲಿ ಒಂದು ಸ್ಲ್ಯಾಬ್  ಇತರ ಸ್ಲ್ಯಾಬ್ ಗಳ ಮೇಲೆ ಅಪ್ಪಳಿಸಿತು, ಇವೆಲ್ಲವೂ ನೆಲ ಮಹಡಿಯಲ್ಲಿ ಜಾರಿದವು, ಈ ವೇಳೆ ನಿವಾಸಿಗಳು ಕಟ್ಟಡದ ಅವಶೇಷದಡಿ ಸಿಲುಕಿದ್ದಾರೆ ಎಂದು ಕದಮ್ ಹೇಳಿದರು.

ಘಟನಾ ಸ್ಥಳದಲ್ಲಿ  ಎನ್ ಡಿ ಆರ್ ಎಫ್  ಸಿಬ್ಬಂದಿಗಳ ತಂಡ ರಕ್ಷಣಾ ಕಾರ್ಯಾಚರಣೆಗೆ ಸೇರಿಕೊಂಡಿದೆ ಎಂದು ಅವರು ಹೇಳಿದರು. ಸ್ಥಳೀಯ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಧಾವಿಸಿ 11 ನಿವಾಸಿಗಳನ್ನು ರಕ್ಷಿಸಿದ್ದಾರೆ, ಅವರನ್ನು ಪ್ರಥಮ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತಪಟ್ಟವರನ್ನು ಮಾಂಟಿ ಮಿಲಿಂದ್ ಪಾರ್ಷೆ (12), ಐಶ್ವರ್ಯಾ ಹರೀಶ್ ದೋಡ್ವಾಲ್ (23), ಹರೀಶ್ ದೋಡ್ವಾಲ್ (40) ಹಾಗೂ  ಸಾವಿತ್ರಿ ಪಾರ್ಷೆ (60) ಎಂದು ಗುರುತಿಸಲಾಗಿದೆ.

ಸಂಧ್ಯಾ ದೋಡ್ವಾಲ್ ಎಂಬ ಮಹಿಳೆ  ಕಾಣೆಯಾಗಿದ್ದು, ರಕ್ಷಣಾ ತಂಡಗಳು ಅವರನ್ನು ಕಟ್ಟಡದ ಅವಶೇಷಗಳಲ್ಲಿ ಪತ್ತೆ ಹಚ್ಚಲು ಪ್ರಯತ್ನಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News