ಮೋದಿಯನ್ನು ‘ನಗ್ನ ದೊರೆ’ ಎಂದ ಕವನ: ಗುಜರಾತಿ ಕವಯಿತ್ರಿ ಮೇಲೆ ಬಿಜೆಪಿ ಐಟಿ ಸೆಲ್ ಕೆಂಗಣ್ಣು

Update: 2021-05-15 16:53 GMT

ಹೊಸದಿಲ್ಲಿ, ಮೇ 15: ಗುಜರಾತಿ ಕಾವ್ಯದ ಮುಂದಿನ ಅತಿ ದೊಡ್ಡ ಪ್ರತೀಕ ಎಂದು ರಾಜ್ಯದ ಬಲಪಂಥೀಯ ಸಾಹಿತಿಗಳಿಂದ ಪ್ರಶಂಸೆಗೊಳಗಾದ ಗುಜರಾತ್ನ ಕವಯಿತ್ರಿ ಪಾರುಲ್ ಖಕ್ಕರ್ ಈಗ ಬಿಜೆಪಿಯ ಐಟಿ ಸೆಲ್ನ ಟ್ರೋಲ್ ಪಡೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೊರೋನ ಎರಡನೇ ಅಲೆ ನಿರ್ವಹಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿರುವುದರಿಂದ ಭಾರತೀಯರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅವರು ಪ್ರಭಾವಶಾಲಿ ಕವನವೊಂದನ್ನು ಬರೆದಿದ್ದರು. 

ಪಾರುಲ್ ಖಕ್ಕರ್ ಅವರು ‘ಶಬ್ವಾಹಿನಿ ಗಂಗಾ’ ಎಂಬ ಶೀರ್ಷಿಕೆಯ ಕವನವನ್ನು ತನ್ನ ಸಾಮಾಜಿಕ ಜಾಲ ತಾಣದ ಖಾತೆಯಲ್ಲಿ ಮೇ 11ರಂದು ಪೋಸ್ಟ್ ಮಾಡಿದ್ದರು. ಪುಟ್ಟದಾದ ಹಾಗೂ ಪ್ರಭಾವಶಾಲಿಯಾದ ಈ ಗುಜರಾತಿ ವಿಡಂಬನಾತ್ಮಕ ಕವನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಮ ರಾಜ್ಯವನ್ನು ಆಳುತ್ತಿರುವ ‘ನಗ್ನ ದೊರೆ’ ಎಂದು ಹಾಗೂ ಪವಿತ್ರ ಗಂಗಾ ನದಿಯನ್ನು ಹೆಣಗಳನ್ನು ಸಾಗಿಸುವ ಗಾಡಿ ಎಂದು ವಿವರಿಸಲಾಗಿತ್ತು. 14 ಸಾಲುಗಳ ಈ ಕವನ ಒಂದು ವಾರದಲ್ಲಿ ಕನಿಷ್ಠ 6 ಭಾಷೆಗೆ ಭಾಷಾಂತರಗೊಂಡಿತ್ತು. ಇದು ಸಾಂಕ್ರಾಮಿಕ ರೋಗದಿಂದ ಉಂಟಾದ ದುರಂತಗಳಿಂದ ದುಃಖಿತರಾಗಿರುವ, ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದೇ ಇರುವ ಹಾಗೂ ಅದರಿಂದ ದೂರ ಇರುವ ಕೇಂದ್ರ ಸರಕಾರದ ಬಗ್ಗೆ ಆಕ್ರೋಶಿತರಾದ ಎಲ್ಲ ಭಾರತೀಯನ ಧ್ವನಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News